

ಅವಿನಾಶ್ ಜೈನಹಳ್ಳಿ ಮೈಸೂರು
ಬೆಂಗಳೂರು ನಗರದ ಈಜು ಪಟುಗಳು ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆಯ ಅಂತಿಮ ದಿನವೂ ಪ್ರಾಬಲ್ಯ ಮೆರೆದು ಹೆಚ್ಚು ಪದಕ ಪಡೆದರು.
ಪುರುಷರ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳೊಂದಿಗೆ 20 ಅಂಕ ಗಳಿಸಿದ ಬೆಂಗಳೂರು ಗ್ರಾಮಾಂತರ ವಿಭಾಗದ ಎಲ್.ಮಣಿಕಂಠ ಹಾಗೂ ಮಹಿಳಾ ವಿಭಾಗದಲ್ಲಿ ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ 23 ಅಂಕ ಗಳಿಸಿದ ಬೆಂಗಳೂರು ನಗರದ ವಿ.ಪ್ರೀತಾ ಮಹಿಳೆಯರ ವಿಭಾಗದ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದ ಈಜುಕೊಳದಲ್ಲಿ ಶುಕ್ರವಾರ ಮಹಿಳಾ ವಿಭಾಗದ 100 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ವಿ.ಪ್ರೀತಾ(1.05 ನಿ.) ಪ್ರಥಮ, ಮೈಸೂರು ವಿಭಾಗದ ರಚನಾ ಎಸ್.ಆರ್.ರಾವ್ ದ್ವಿತೀಯ ಹಾಗೂ ವರ್ಷಾ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದ 100 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ಕೆ.ಕುಶಾಲ್(56.23 ಸೆ.) ಪ್ರಥಮ, ಮೈಸೂರು ವಿಭಾಗದ ಚಿಂತನ್‌ಶೆಟ್ಟಿ ದ್ವಿತೀಯ ಹಾಗೂ ಇದಾಂತ್ ಚತುರ್ವೇದಿ ತೃತೀಯ ಸ್ಥಾನ ಪಡೆದರು.
200 ಮೀ.ಬ್ರೆಸ್ಟ್ ಸ್ಟ್ರೋಕ್: 1.ಎಲ್.ಮಣಿಕಂಠ(ಬೆಂ.ಗ್ರಾ., 2.33 ನಿ.), 2.ಸುಯೋಗ್ ಗೌಡ(ಬೆಂ.ನ.), 3.ಪವನ್(ಮೈಸೂರು)., 100 ಮೀ. ಬ್ಯಾಕ್ ಸ್ಟ್ರೋಕ್: 1.ಬಿ.ಜತಿನ್ (ಬೆಂ.ನ., 1.02 ನಿ.), 2.ಇದಾಂತ್ ಚತುರ್ವೇದಿ (ಬೆಂ.ನ.), 3. ಸಾತ್ವಿಕ್ ನಾಯಕ್ (ಮೈಸೂರು)., 200 ಮೀ.ಫ್ರೀ ಸ್ಟೈಲ್: 1.ಎಲ್.ಮಣಿಕಂಠ(ಬೆಂ. ಗ್ರಾ., 2.05 ನಿ.), 2.ಕೆ.ಕುಶಾಲ್ (ಬೆಂ.ನ.), 3.ಜೆ.ಟಿ.ಸೂರ್ಯ (ಬೆಂ.ನ.)., 4*100 ಮೀ. ಫ್ರೀಸ್ಟೈಲ್ ರಿಲೇ: 1.ಬೆಂಗಳೂರು ನಗರ ತಂಡ(3.55 ನಿ.), 2.ಮೈಸೂರು ವಿಭಾಗ ತಂಡ (3.56 ನಿ.), 3. ಬೆಂಗಳೂರು ಗ್ರಾಮಾಂತರ ತಂಡ(4.27 ನಿ.).
200 ಮೀ.ಬ್ರೆಸ್ಟ್ ಸ್ಟ್ರೋಕ್: 1.ಸಿ.ಎಂ.ಗಗನಾ (ಬೆಂ.ನ., 3.09 ನಿ.), 2.ಧ್ರುತಿ (ಬೆಂ.ನ.), 3.ಚಿನ್ಮಯಿ ಎಂ.ಗೌಡ (ಬೆಂ.ಗ್ರಾ.)., 100 ಮೀ.ಬ್ಯಾಕ್ ಸ್ಟ್ರೋಕ್: 1.ಅದಿತಿ ವಿ.ರೆಲೇಕರ್(ಬೆಂ.ನ., 1.16 ನಿ.), 2. ಜಾಹ್ನವಿ ಆರ್.ಶೆಟ್ಟಿ (ಬೆಂ.ನ.), 3.ಎಂ.ಪೂರ್ವಿ (ಮೈಸೂರು)., 200 ಮೀ.ಫ್ರೀ ಸ್ಟೈಲ್: 1.ವಿ.ಪ್ರೀತಾ (ಬೆಂ.ನ., 2.20 ನಿ.), 2.ಅದಿತಿ ವಿ.ರೆಲೇಕರ್ (ಬೆಂ.ನ.), 3. ರಚನಾ ಆರ್.ರಾವ್(ಮೈಸೂರು)., 4*100 ಮೀ. ಫ್ರೀಸ್ಟೈಲ್ ರಿಲೇ: 1. ಬೆಂಗಳೂರು ನಗರ ತಂಡ(4.50 ನಿ.), 2. ಬೆಂಗಳೂರು ಗ್ರಾಮಾಂತರ ತಂಡ (5.24 ನಿ.), 3. ಕಲಬುರಗಿ ತಂಡ(10.54 ನಿ.).