‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆ: ಬೆಂಗಳೂರು ನಗರ ವಿಭಾಗದ ಈಜುಪಟುಗಳ ಪಾರಮ್ಯ

SAN_9787
Published on

ಮೈಸೂರು: ಬೆಂಗಳೂರು ನಗರ ವಿಭಾಗದ ಈಜು ಪಟುಗಳು ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆಯ ಮೊದಲ ದಿನ ಹೆಚ್ಚು ಪ್ರಶಸ್ತಿ ಪಡೆಯುವ ಮೂಲಕ ಪ್ರಾಬಲ್ಯ ಮೆರೆದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದ ಈಜು ಕೊಳದಲ್ಲಿ ಗುರುವಾರ ಆರಂಭಗೊಂಡ ಈಜು ಸ್ಪರ್ಧೆಯ ಪುರುಷರು ಹಾಗೂ ಮಹಿಳೆಯರ ಎರಡು ವಿಭಾಗದಲ್ಲೂ ಬೆಂಗಳೂರು ನಗರ ವಿಭಾಗದ ಈಜುಪಟುಗಳು ಹೆಚ್ಚು ಪದಕ ಬೇಟೆಯಾಡಿದರು.

ಮಹಿಳೆಯರ 400 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ವಿ.ಪ್ರೀತಾ(4.55 ನಿಮಿಷ) ಪ್ರಥಮ, ಅದಿತಿ ವಿ.ರೆಲೇಕರ್(5.07 ನಿ.) ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರ ಡಿಂಪಲ್ ಸೋನಾಕ್ಷಿ ಎಂ.ಗೌಡ(5.33 ನಿ.) ತೃತೀಯ ಸ್ಥಾನ ಪಡೆದರು.

ಪುರುಷರ 400 ಮೀ. ಫ್ರೀ ಸ್ಟೈಲ್‌ನಲ್ಲಿ ಮೈಸೂರು ವಿಭಾಗದ ಚಿಂತನ್ ಶೆಟ್ಟಿ (4.23 ನಿ.) ಪ್ರಥಮ, ಬೆಂಗಳೂರು ನಗರದ ಪಿ.ವಿ.ಮೋನಿಷ್(4.26 ನಿ.) ದ್ವಿತೀಯ ಹಾಗೂ ಮೈಸೂರಿನ ಸಾತ್ವಿಕ್ ನಾಯಕ್(4.32 ನಿ.) ತೃತೀಯ ಸ್ಥಾನ ಪಡೆದರು.

ಪುರುಷರ ವಿಭಾಗದ ಫಲಿತಾಂಶ

100 ಮೀ. ಬಟರ್ ಫ್ಲೈ: 1.ಬಿ.ಜತಿನ್ (ಬೆಂಗಳೂರು ನಗರ, 59 ಸೆ.), 2.ಚಿಂತನ್ ಶೆಟ್ಟಿ (ಮೈಸೂರು, 1.00.03 ನಿ.), 3.ಜೆ.ಟಿ.ಸೂರ್ಯ (ಬೆಂ.ನ., 1.00.29 ನಿ.)., 200 ಮೀ. ಬ್ಯಾಕ್ ಸ್ಟ್ರೋಕ್: 1.ಬಿ.ಜತಿನ್ (ಬೆಂ.ನ., 2.19.41 ನಿ.), 2.ಇದಾಂತ್ ಚತುರ್ವೇದಿ (ಬೆ.ನಂ., 2.19.66 ನಿ.), 3.ಸಾತ್ವಿಕ್ ನಾಯಕ್ (ಮೈಸೂರು, 2.27 ನಿ.)., 100 ಮೀ. ಬ್ರೆಸ್ಟ್ ಸ್ಟ್ರೋಕ್: 1.ಎಲ್.ಮಣಿಕಂಠ (ಬೆಂ.ಗ್ರಾ., 1.09 ನಿ.), 2.ಪ್ರಣವ್ (ಮೈಸೂರು, 1.11 ನಿ.), 3.ಸುಯೋಗ್ ಗೌಡ (ಬೆಂ.ನ., 1.13 ನಿ.)., 200 ಮೀ.ಐಎಂ: 1.ಎಲ್.ಮಣಿಕಂಠ(ಬೆಂ.ಗ್ರಾ., 2.17 ನಿ.), 2.ಜೆ.ಟಿ.ಸೂರ್ಯ (ಬೆಂ.ನ., 2.20 ನಿ.), 3.ಬಿ.ಜತಿನ್ (ಬೆಂ.ನ., 2.23 ನಿ.).

ಮಹಿಳೆಯರ ವಿಭಾಗದ ಫಲಿತಾಂಶ

100 ಮೀ. ಬಟರ್ ಫ್ಲೈ: 1. ಆರ್.ಕುಶಿಕಾ (ಬೆಂ.ನ., 1.16 ನಿ.), 2.ಡಿಂಪಲ್ ಸೋನಾಕ್ಷಿ ಎಂ.ಗೌಡ (ಬೆಂ.ಗ್ರಾ., 1.18.31 ನಿ.), 3.ಡಿ.ಎಸ್.ಶ್ವಿತಿ ನಾಯಕ್(ಮೈಸೂರು, 1.18.32 ನಿ.)., 200 ಮೀ. ಬ್ಯಾಕ್ ಸ್ಟ್ರೋಕ್: 1. ಜಾಹ್ನವಿ ಆರ್.ಶೆಟ್ಟಿ (ಬೆಂ.ನ., 2.42 ನಿ.), 2.ವಿ.ಪ್ರೀತಾ (ಬೆಂ.ನ., 2.44 ನಿ.), 3.ಎಂ.ಪೂರ್ವಿ (ಮೈಸೂರು 2.58 ನಿ.)., 100 ಮೀ. ಬ್ರೆಸ್ಟ್ ಸ್ಟ್ರೋಕ್: 1.ಸಿ.ಎಂ.ಗಗನಾ(ಬೆಂ.ನ., 1.25 ನಿ.), 2.ವರ್ಷಾ (ಮೈಸೂರು, 1.28 ನಿ.), 3.ಧ್ರುತಿ (ಬೆಂ.ನ., 1.30 ನಿ.)., 200 ಮೀ.ಐಎಂ: 1.ವಿ.ಪ್ರೀತಾ (ಬೆಂ.ನ., 2.41 ನಿ.), 2.ಅದಿತಿ ವಿ.ರೆಲೇಕರ್ (ಬೆಂ.ನ., 2.44 ನಿ.), 3.ಎಂ.ಪೂರ್ವಿ (2.55 ನಿ.).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net