ಕಾಂಗ್ರೆಸ್ ಮುಖಂಡರು ಹಾಗೂ ಕುಟುಂಬದವರಿಗೆ ಸೀಮಿತವಾದ ಮೈಸೂರು ದಸರಾ : ಸಂಸದ ಯದುವೀರ್ ಟೀಕೆ

yaduveer
Published on

ಮೈಸೂರು: ಈ ಬಾರಿಯ ದಸರಾ ಉತ್ಸವ ಅವ್ಯವಸ್ಥೆಯಿಂದ ಕೂಡಿತ್ತು. ಗೋಲ್ಡ್‌ಕಾರ್ಡ್ ಪಡೆದವರಿಗೂ ಸಹ ಅರಮನೆ ಒಳಗೆ ಪ್ರವೇಶಿಸಲು ಅವಕಾಶ ದೊರೆಯಲಿಲ್ಲ ಎಂದು ಸಂಸದ ಂುದುವೀರ್ ಕೃಷ್ಣದತ್ತ ಚಾಮರಾಜ ಒಡೆಂುರ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿಯ ದಸರಾ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಕುಟುಂಬದವರಿಗೆ ಸೀಮಿತವಾಗಿತ್ತು. ಪಾಸ್ ಹಂಚಿಕೆಯಲ್ಲಿ ಪಾರದರ್ಶಕತೆ ತರುವಂತೆ ನಾವು ಹಲವಾರು ಬಾರಿ ಒತ್ತಾಯ ಮಾಡಿದ್ದೆವು. ಜಂಬೂಸವಾರಿ ವೀಕ್ಷಣೆಗೆ ಎಷ್ಟು ಟಿಕೆಟ್ ಮುದ್ರಣವಾಗಿದೆ? ಯಾರಿಗೆಲ್ಲ ಹಂಚಿಕೆಯಾಗಿದೆ ಎಂಬ ಪಾರದರ್ಶಕ ಮಾಹಿತಿ ಹಂಚಿಕೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ಸರ್ಕಾರ ನಗರ ಸ್ಥಳೀಂು ಸಂಸ್ಥೆಗಳ ಚುನಾವಣೆಂುನ್ನು ಬೇಕಂತಲೇ ಮುಂದೂಡುತ್ತಾ ಬರುತ್ತಿದ್ದು, ಇದರಿಂದ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಂೋಜನೆಂುಡಿ ಬಂದಿದ್ದ 70 ಕೋಟಿ ರೂ. ಅನುದಾನ ವಾಪಾಸ್ ಹೋಗಿದೆ. ಸರ್ಕಾರ ಕೂಡಲೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುರಿದ ಮಳೆಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಯಿತು. ಕ್ಯಾತವಾರನಹಳ್ಳಿ ಭಾಗದಲ್ಲಿ ಒಳಚರಂಡಿ ನೀರು ರಸ್ತೆಂು ಮೇಲೆ ಹರಿದು ಜನರು ಸಮಸ್ಯೆ ಎದುರಿಸಿದರು. ಆದರೆ, ಇವರ ಸಮಸ್ಯೆಗಳನ್ನು ಯಾರು ಕೇಳುವವರು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ,ವಾಜಿ ಮೇಂುರ್ ಶಿವಕುವಾರ್, ಬಿಜೆಪಿ ನಗರ ಪ್ರಧಾನ ಕಾಂರ್ುದರ್ಶಿಗಳಾದ ಬಿ.ಎಂ.ರಘು, ಕೇಬಲ್ ಮಹೇಶ್, ನಗರ ವಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಸಂತೋಷ್ ಕುವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net