ದಸರಾ ಚಲನಚಿತ್ರೋತ್ಸವ ಪ್ರವೇಶಕ್ಕೆ ನೋಂದಣಿ ಪ್ರಾರಂಭ

Puneeth
Published on


ಮೈಸೂರು: ಚಲನಚಿತ್ರೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದ್ದು, ಐನಾಕ್ಸ್ ಚಿತ್ರಮಂದಿರದ 3 ಪರದೆಗಳಲ್ಲಿ ಮತ್ತು ಡಿಆರ್‌ಸಿ ಚಿತ್ರಮಂದಿರದ 1 ಪರದೆಯಲ್ಲಿ ಪ್ರತಿದಿನ 4 ಪ್ರದರ್ಶನದಂತೆ ಒಟ್ಟು 112 ಪ್ರದರ್ಶನಗಳು ನಡೆಯಲಿವೆ.

ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು, ಭಾರತೀಯ ಪನೋರಮಾ ಹಾಗೂ ಅಂತಾರಾಷ್ಟ್ರೀಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ದಸರಾ ಚಲನಚಿತ್ರೋತ್ಸವ ಪ್ರವೇಶಕ್ಕಾಗಿ ನೊಂದಣಿ ಈಗಾಗಲೇ ಪ್ರಾರಂಭವಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಫ್‌ಲೈನ್ ಮೂಲಕ ಮಾಡಲಾಗುತ್ತಿದೆ. ಆಫ್ ಲೈನ್ ನೊಂದಣಿಗೆ ಯಾವುದಾದರೂ ಅಧಿಕೃತ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಬೇಕು.  ಹೆಚ್ಚಿನ ಮಾಹಿತಿಗಾಗಿ ದೂ.ಸಂ: 7411564510, 9844393681 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net