

ಮೈಸೂರು: ನಾಡಹಬ್ಬ ದಸರಾ ಉತ್ಸವಕ್ಕೆ ಈ ಬಾರಿ ವಿವಿಧ ಮೂಲಗಳಿಂದ 31.08 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 28.74 ಕೋಟಿ ರೂ. ವೆಚ್ಚವಾಗಿದ್ದು, 2.34 ಕೋಟಿ ರೂ. ಉಳಿತಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ವಿವಿಧ ಉಪ ಸಮಿತಿ, ವಿವಿಧ ಇಲಾಖೆ ಹಾಗೂ ಪ್ರಾಧಿಕಾರದಿಂದ ಒಟ್ಟು 26.54 ಕೋಟಿ ರೂ. ವೆಚ್ಚವಾಗಿದೆ. ಮೈಸೂರು ದಸರಾ ಉತ್ಸವಕ್ಕೆ ಬಿಡುಗಡೆಯಾದ ಮೊತ್ತದಲ್ಲಿ ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾ ಉತ್ಸವಕ್ಕೆ ತಲಾ 1 ಕೋಟಿ ರೂ. ಹಾಗೂ ಸಕಲೇಶಪುರ ದಸರಾ ಉತ್ಸವಕ್ಕೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮೈಸೂರು ರಾಜಮನೆತಕ್ಕೆ 47 ಲಕ್ಷ ರೂ. ಗೌರವ ಧನ ನೀಡಲಾಗಿದ್ದು, ಇದರಲ್ಲಿ 7 ಲಕ್ಷ ರೂ. ಜಿಎಸ್‌ಟಿ ಒಳಗೊಂಡಿದೆ. ನಗರದಲ್ಲಿ ದೀಪಾಲಂಕಾರಕ್ಕೆ ಮಾಡಿರುವ ವೆಚ್ಚವನ್ನು ಈ ಲೆಕ್ಕಪತ್ರದಲ್ಲಿ ಒಳಗೊಂಡಿಲ್ಲ. ಆ ವಿವರವನ್ನು ಸೆಸ್ಕ್ ಪ್ರತ್ಯೇಕವಾಗಿ ನೀಡಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುದಾನದ ವಿವರ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ., ಪ್ರಾಯೋ ಜಕತ್ವದಿಂದ 32.50 ಲಕ್ಷ ರೂ., ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76.38 ಲಕ್ಷ ರೂ., ಮೈಸೂರು ಅರಮನೆ ಮಂಡಳಿಯಿಂದ 5 ಕೋಟಿ ರೂ. ಅನುದಾನ ದಸರಾ ಉತ್ಸವಕ್ಕೆ ಬಿಡುಗಡೆ ಮಾಡಲಾಗಿತ್ತು ಎಂದರು.
ದಸರಾ ವೆಚ್ಚದ ವಿವರ:
ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿಯಿಂದ 78.57 ಲಕ್ಷ ರೂ., ಸ್ಥಳಾವಕಾಶ, ಸಾರಿಗೆ ಮತ್ತು ಗಣ್ಯರು, ಕಲಾವಿದರಿಗೆ ಒಟ್ಟು 3.77 ಕೋಟಿ ರೂ.ಭರಿಸಲಾಗಿದೆ. ಮೆರವಣಿಗೆ ಉಪ ಸಮಿತಿಯಿಂದ 2.22 ಕೋಟಿ ರೂ., ಪಂಜಿನ ಕವಾಯತು ಉಪ ಸಮಿತಿಯಿಂದ 1.17 ಕೋಟಿ ರೂ., ಸ್ತಬ್ಧಚಿತ್ರ ಉಪ ಸಮಿತಿಯಿಂದ 29.88 ಲಕ್ಷ ರೂ., ರೈತ ದಸರಾ ಉಪ ಸಮಿತಿಯಿಂದ 51.66 ಲಕ್ಷ ರೂ., ಕ್ರೀಡಾ ಉಪ ಸಮಿತಿಯಿಂದ 22.02 ಲಕ್ಷ ರೂ., ಸಾಂಸ್ಕೃತಿ ಉಪ ಸಮಿತಿಯಿಂದ 1.61 ಕೋಟಿ ರೂ., ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯಿಂದ 17.90 ಲಕ್ಷ ರೂ., ಕವಿಗೋಷ್ಠಿ ಉಪ ಸಮಿತಿಯಿಂದ 41.69 ಲಕ್ಷ ರೂ., ಯೋಗ ದಸರಾ ಉಪ ಸಮಿತಿಯಿಂದ 18.94 ಲಕ್ಷ ರೂ., ಯುವ ಸಂಭ್ರಮ, ಯುವದ ದಸರಾ ಉಪ ಸಮಿತಿಯಿಂದ 6.36 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ 31.07 ಲಕ್ಷ ರೂ.ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
ಸ್ವಚ್ಛತೆ ಮತ್ತು ವ್ಯವಸ್ಥೆ ಉಪ ಸಮಿತಿಯಿಂದ 29.08 ಲಕ್ಷ ರೂ., ಚಲನಚಿತ್ರ ಉಪ ಸಮಿತಿಯಿಂದ 25.50 ಲಕ್ಷ ರೂ., ಕುಸ್ತಿ ಉಪ ಸಮಿತಿಯಿಂದ 34.47 ಲಕ್ಷ ರೂ., ಪ್ರಚಾರ ಉಪ ಸಮಿತಿಯಿಂದ 7.40 ಲಕ್ಷ ರೂ., ದಸರಾ ದರ್ಶನ ಉಪ ಸಮಿತಿಯಿಂದ 18.50 ಲಕ್ಷ ರೂ., ಅರಣ್ಯ ಇಲಾಖೆಯಿಂದ 1.46 ಕೋಟಿ ರೂ., ರಂಗಾಯಣದಿಂದ 10 ಲಕ್ಷ ರೂ. ವೆಚ್ಚವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 1.88 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 1.86 ಕೋಟಿ ರೂ., ನಗರ ಪಾಲಿಕೆಯಿಂದ 2.01 ಕೋಟಿ ರೂ.ಗಳನ್ನು ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.