

ಅವಿನಾಶ್ ಜೈನಹಳ್ಳಿ ಮೈಸೂರು
ರಾಜ್ಯ ಮಟ್ಟದ ‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆಯ ಮೊದಲ ದಿನ ಬೆಂಗಳೂರು ಈಜುಪಟುಗಳು ಪ್ರಾಬಲ್ಯ ಸಾಧಿಸಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದ ಈಜು ಕೊಳದಲ್ಲಿ ಮಂಗಳವಾರ ಆರಂಭಗೊಂಡ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ, ಡಾಲ್ಫಿನ್ ಅಕ್ವೆಟಿಕ್, ವಿಜಯನಗರ ಈಜು ಕೇಂದ್ರದ ಸ್ಪರ್ಧಿಗಳು ಹೆಚ್ಚಿನ ಪದಕ ದೋಚಿದರು.
ಡಾಲ್ಫಿನ್ ಆಕ್ವೆಟಿಕ್‌ನ ನೈಶಾ ಶೆಟ್ಟಿ ಮಹಿಳಾ ವಿಭಾಗದ 100 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್ ಸ್ಟ್ರೋಕ್, 100 ಮೀ. ಬಟರ್ ಫ್ಲೈನಲ್ಲಿ ಸೇರಿದಂತೆ ಒಟ್ಟು ನಾಲ್ಕು ಚಿನ್ನದ ಪದ ಪಡೆದಿದ್ದಾಳೆ. ಮೈಸೂರಿನ ಎಸ್.ತಾನ್ಯಾ 50 ಮೀ. ಮತ್ತು 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪಕದ ಹಾಗೂ 200 ಮೀ. ಐಎಂನಲ್ಲಿ ಬೆಳ್ಳಿ ಪಡೆದಿದ್ದಾಳೆ.
ಪುರುಷರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರದ ಡಿ.ಎಸ್. ಪೃಥ್ವಿಕ್ ಹಾಗೂ ಎಂ. ಪೃಥ್ವಿ ತಲಾ ಎರಡು ಚಿನ್ನದ ಪದಕ ಪಡೆದು ಮಿಂಚಿದರು.
1500 ಮೀ.ಫ್ರೀಸ್ಟೈಲ್: 1.ಎಚ್.ಎಂ.ಪ್ರಶಾನ್ಸ್(ಬಸವನಗುಡಿ, 18:10 ನಿಮಿಷ.), 2.ಪಾರ್ಥ ಪಿ.ಶೆಟ್ಟಿ(ಪಿಇಟಿ ಆಕ್ವೆಟಿಕ್ ಮಂಡ್ಯ), 3.ಎಸ್.ನಮನ್‌ಗೌಡ(ಪಿಇಟಿ ಆಕ್ವೆಟಿಕ್ ಮಂಡ್ಯ). 100 ಮೀ.ಬ್ಯಾಕ್ ಸ್ಟ್ರೋಕ್: 1.ಎಸ್.ವಿಶ್ವನಾಥನ್ (ಪಿಎಂ ಈಜು ಕೇಂದ್ರ, 1.06 ನಿ.), 2.ಎನ್.ಧೋನೀಶ್(ವಿಜಯನಗರ ಆಕ್ವೆಟಿಕ್), ಎನ್.ಹೇಮನ್(ಪಿಇಟಿ ಆಕ್ವೆಟಿಕ್ ಮಂಡ್ಯ). 50 ಮೀ.ಬ್ರೆಸ್ಟ್ ಸ್ಟ್ರೋಕ್: 1.ಡಿ.ಎಸ್.ಪೃಥ್ವಿಕ್(ಬಸವನಗುಡಿ, 31.32 ಸೆಕೆಂಡ್), 2.ಸೂರ್ಯ ಜೋಯಪ್ಪ(ಬಸವನಗುಡಿ), 3.ಶ್ರೇಯಸ್ ಮಂಜುನಾಥ್(ಬಸವನಗುಡಿ). 100 ಮೀ.ಬಟರ್ ಫ್ಲೈ:1.ಎಂ.ಪೃಥ್ವಿ(ಬಸವನಗುಡಿ, 59.28 ಸೆ.), 2.ಮ್ಯಾಥಿವ್(ಬಸವನಗುಡಿ), 3.ಶ್ರೇಯಸ್ ವೆಂಕಟೇಶ್(ಬಸವನಗುಡಿ). 200 ಮೀ.ಐಎಂ: 1.ಸಾಹಿಲ್ ದಲಾಲ್(ಬಸವನಗುಡಿ, 2.21 ನಿ.), 2. ಸೂರ್ಯ ಜೋಯಪ್ಪ (ಬಸವನಗುಡಿ), 3.ಡಿ.ಎಸ್.ಪೃಥ್ವಿಕ್(ಬಸವನಗುಡಿ). 400 ಮೀ. ಫ್ರೀಸ್ಟೈಲ್: 1.ಎನ್.ಧೋನೀಶ್(ವಿಜಯನಗರ, 4.22 ನಿ.), 2. ಎಚ್.ಎಂ.ಪ್ರಶಾನ್ಸ್(ಬಸವನಗುಡಿ), 3.ಸಾಹಿಲ್ ದಲಾಲ್(ಬಸವನಗುಡಿ). 200 ಮೀ.ಬ್ಯಾ ಸ್ಟೋಕ್: 1.ಧ್ಯಾನ್ ಬಾಲಕೃಷ್ಣ(ಬಸವನಗುಡಿ, 2.15 ನಿ.), 2.ಲಿತೀಶ್ ಜಿ.ಗೌಡ(ಬಸವನಗುಡಿ), 3.ಎನ್.ಹೇಮನ್(ಪಿಇಟಿ). 100 ಬ್ರೆಸ್ಟ್ ಸ್ಟ್ರೋಕ್: 1.ಡಿ.ಎಸ್.ಪೃಥ್ವಿಕ್(ಬಸವನಗುಡಿ, 1.09 ನಿ.), 2.ಸೂರ್ಯ ಜೋಯಪ್ಪ(ಬಸವನಗುಡಿ), 3.ಶ್ರೇಯಸ್ ಮಂಜುನಾಥ್(ಬಸವನಗುಡಿ). 100 ಮೀ.ಫ್ರೀಸ್ಟೈಲ್: 1.ಎಂ.ಪೃಥ್ವಿ(ಬಸವನಗುಡಿ, 54.79 ಸೆ.), 2.ಎಸ್.ವಿಶ್ವನಾಥನ್(ಪಿಎಂ ಈಜು ಕೇಂದ್ರ), 3.ಧ್ಯಾನ್ ಬಾಲಕೃಷ್ಣ(ಬಸವನಗುಡಿ).
1500 ಮೀ.ಫ್ರೀಸ್ಟೈಲ್: 1.ಅದಿತಿ ಎನ್.ಮುಲಯ್(ಬಸವನಗುಡಿ, 18.29 ನಿ.), 2.ಬಿ.ಎಸ್.ಜನ್ಯಾ (ಬಸವನಗುಡಿ), 3.ಆಸ್ರ ಸುಧೀರ್(ಬಸವನಗುಡಿ). 100 ಮೀ.ಬ್ಯಾಕ್‌ಸ್ಟ್ರೋಕ್: 1.ನೈಶಾ ಶೆಟ್ಟಿ(ಡಾಲ್ಫಿನ್, 1.11 ನಿ.), 2.ಸಿದ್ಧಿ ಗೌತಮ್ (ಡಾಲ್ಫಿನ್), 3.ಕೆ.ಆರ್.ಶ್ರುತಿ (ಗ್ಲೋಬಲ್ ಈಜು ಕೇಂದ್ರ). 50 ಮೀ.ಬ್ರೆಸ್ ಸ್ಟ್ರೋಕ್: 1.ಎಸ್.ತಾನ್ಯಾ (ಮೈಸೂರು, 36.81 ಸೆ.), 2.ಜಗಶ್ರೀ ಪೂಜಾ(ಬಸವನಗುಡಿ), 3.ವಿ.ಹಿತೈಶಿ(ವಿಜಯನಗರ). 100 ಮೀ.ಬಟರ್ ಫ್ಲೈ: 1.ನೈಶಾ ಶೆಟ್ಟಿ (ಡಾಲ್ಫಿನ್, 1.06 ನಿ.), 2.ರಿಶಿಕಾ (ಬಸವನಗುಡಿ), 3.ತನಿಶಾ ವಿನಯ್(ಬಸವನಗುಡಿ). 200 ಮೀ.ಬಟರ್ ಫ್ಲೈ: 1.ವಿಹಿತಾ ನಯನಾ(ಬಸವನಗುಡಿ, 2.30 ನಿ.), 2.ಎಸ್.ತಾನ್ಯಾ (ಮೈಸೂರು), 3.ವಿ.ಹಿತೈಶಿ(ವಿಜಯನಗರ). 400 ಮೀ.ಫ್ರೀಸ್ಟೈಲ್: 1.ಅದಿತಿ (ಬಸವನಗುಡಿ, 4.43 ನಿ.), 2.ಬಿ.ಎಸ್.ಜನ್ಯಾ(ಬಸವನಗುಡಿ), 3.ತನಿಷಾ ವಿನಯ್(ಬಸವನಗುಡಿ). 200 ಮೀ.ಬ್ಯಾಕ್ ಸ್ಟ್ರೋಕ್: 1.ನೈಶಾ ಶೆಟ್ಟಿ(ಡಾಲ್ಫಿನ್, 2.39ನಿ.), 2.ಸಿದ್ಧಿ ಗೌತಮ್(ಡಾಲ್ಫಿನ್), 3.ಕೆ.ಆರ್.ಶ್ರುತಿ(ಮೈಸೂರು). 100 ಮೀ.ಬ್ರೆಸ್ಟ್ ಸ್ಟೋಕ್: 1.ಎಸ್.ತಾನ್ಯಾ(ಮೈಸೂರು, 1.17 ನಿ.), 2.ವಿಹಿತಾ ನಯನಾ(ಬಸವನಗುಡಿ), 3.ಹಿತೈಶಿ(ವಿಜಯನಗರ). 100 ಮೀ. ಫ್ರೀಸ್ಟೈಲ್: 1.ನೈಶಾ ಶೆಟ್ಟಿ(ಡಾಲ್ಫಿನ್, 1.03 ನಿ.), 2.ಲಕ್ಷ್ಮೀ(ಬಸವನಗುಡಿ), 3.ಜಗಶ್ರೀ ಪೂಜಾ(ಬಸವನಗುಡಿ).