

ಮಂಡ್ಯ: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ(ಐಎಲ್‌ವೈಎ್)ಯ ವತಿಯಿಂದ ಜ.17, 18 ಮತ್ತು 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಸೆನೆಸ್ ಕಾನ್‌ಕ್ಲೇವ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ಕಾನ್‌ಕ್ಲೇವ್‌ನ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದರು.
ಯುವ ಪೀಳಿಗೆಯಲ್ಲಿ ಹೊಸ ಚೈತನ್ಯ ಮೂಡಿಸುವ ಸಲುವಾಗಿ ಹಾಗೂ ಸ್ಪೂರ್ತಿ ತುಂಬಲು ಮತ್ತು ಅವರ ನವ ಉದ್ಯಮದ ಆಲೋಚನೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 17ರಂದು ಬೆಳಗ್ಗೆ 10.30ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಎಂಟರ್‌ಪ್ರೈಸಸ್ ನಿರ್ದೇಶಕ ನಿತೇಶ್ ಪಾಟೀಲ್, ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನ ಅಧ್ಯಕ್ಷ ನ್ಯಾ.ಸುಭಾಷ್, ಫೆಡರೇಷನ್ ಆ್ ಇಂಡಸ್ಟ್ರಿಸ್ ಆ್ ಇಂಡಿಯಾದ ಅಧ್ಯಕ್ಷ ಬಾಲಚಂದ್ರರಾವ್, ಆದರ್ಶ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಎಂ.ಜಯಶಂಕರ್, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಐಎಲ್‌ವೈಎ್ ಸಂಸ್ಥಾಪಕ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಅಂದು ಮಧ್ಯಾಹ್ನ 2.30ರಿಂದ 3.30ರವರೆಗೆ ಮೊದಲ ದಿನದ ವಿಚಾರಗೋಷ್ಠಿ ಇರಲಿದೆ. ಸಂಜೆ 6.30ಕ್ಕೆ ಚಿತ್ರನಟ ಡಾಲಿ ಧನಂಜಯ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ರಾತ್ರಿ 7ಕ್ಕೆ ಗಾಯಕ ವಾಸುಕಿ ವೈಭವ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. 18ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಹೆಲ್ತ್ ಸಮಿತ್-ವೈದ್ಯಕೀಯ ನಾಯಕತ್ವ ವಿಷಯವಾಗಿ ವಿಚಾರಗೋಷ್ಠಿ, ಮಧ್ಯಾಹ್ನ 2.30ರಿಂದ ಸಂಜೆ 4ರವರೆಗೆ ಮಹಿಳಾ ಉದ್ಯಮಶೀಲತೆ ವಿಷಯವಾಗಿ ವಿಚಾರಗೋಷ್ಠಿ, ಸಂಜೆ 4ರಿಂದ 5ರವರೆಗೆ ಕ್ರಾಂತಿಕಾರಿ ಭವಿಷ್ಯ ಕುರಿತು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ವಿಚಾರ ಮಂಡಿಸಲಿದ್ದಾರೆ. ರಾತ್ರಿ 7ಕ್ಕೆ ರಾಜೇಶ್ ಕೃಷ್ಣನ್ ಹಾಗೂ ಅರ್ಚನಾ ಉಡುಪ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮವವಿದ್ದು, ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
19ರ ಬೆಳಗ್ಗೆ 11ರಿಂದ 12ರವರೆಗೆ ಎಫ್‌ಎಂಸಿಸಿ ಮತ್ತು ಎಸ್‌ಕೆಯುಗಳಲ್ಲಿ ಆಕರ್ಷಕ ವಿನ್ಯಾಸ ಮತ್ತು ವಿನೂತನ ಪ್ಯಾಕೇಜಿಂಗ್‌ನ ಪ್ರಾಮುಖ್ಯತೆ ವಿಷಯವಾಗಿ ವಿಚಾರಗೋಷ್ಠಿ, ಮಧ್ಯಾಹ್ನ 12 ರಿಂದ 1ರವರೆಗೆ ಕಬ್ಬು ಉದ್ಯಮದಲ್ಲಿ ವಿನೂತನ ಅವಕಾಶಗಳ ವಿಷಯವಾಗಿ ವಿಚಾರಗೋಷ್ಠಿ, ಮಧ್ಯಾಹ್ನ 2.30ರಿಂದ 3.30ರವರೆಗೆ ಮುಂದಿನ ಪೀಳಿಗೆಯ ನಾಯಕರ ಸಬಲೀಕರಣ ವಿಷಯವಾಗಿ ವಿಚಾರಗೋಷ್ಠಿ ನಡೆಯಲಿವೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅಶೋಕ್ ಐರನ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರವಾಡಿ, ಐಎಲ್‌ವೈಎ್ ಸಂಸ್ಥಾಪಕ ಅಧ್ಯಕ್ಷ ನವೀನ್ ಭಾಗವಹಿಸಲಿದ್ದಾರೆ. ರಾತ್ರಿ 7ಕ್ಕೆ ಅನನ್ಯ ಭಟ್‌ರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಿದರು.
ಐಎಲ್‌ವೈಎಫ್‌ನ ಮೈಸೂರು ವಿಭಾಗದ ಅಧ್ಯಕ್ಷ ಕೆ.ಎಸ್.ಮಹದೇವಪ್ರಸಾದ್, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್.ಆನಂದ್, ಸ್ವಾಮಿ, ಮೋಹನ್, ಎಚ್.ಎಸ್.ವೀರೇಶ್ ಇದ್ದರು.