ಮೈಸೂರು ನಗರ ಪಾಲಿಕೆ : ವಿವಿಧ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

mcc
Published on

ಮೈಸೂರು: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರಾಗಿ ಸಿ.ಎಸ್. ರಜನಿ ಅಣ್ಣಯ್ಯ, ಪುಟ್ಟನಿಂಗಮ್ಮ, ಷಫೀ ಅಹಮದ್, ಆರ್.ನಾಗರಾಜ್, ಎಂ. ಛಾಯಾದೇವಿ, ಬಿ.ವಿ. ರವೀಂದ್ರ, ಎಂ. ಪ್ರಮೀಳಾ ಭರತ್ ಅವಿರೋಧವಾಗಿ ಆಯ್ಕೆಗೊಂಡರು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಸದಸ್ಯರಾಗಿ ಸ. ವೇದಾವತಿ, ಪ್ರದೀಪ್‌ಚಂದ್ರ, ಅಯಾಜ್ ಪಾಷ, ಎಂ. ಶಿವಕುಮಾರ್, ಸವೂದ್ ಖಾನ್, ಸವಿತಾ, ಎಂ. ಸತೀಶ್, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಸದಸ್ಯರಾಗಿ ಪಲ್ಲವಿ ಬೇಗಂ, ವಿ. ಲೋಕೇಶ್, ಎಚ್.ಎಂ. ಶಾಂತಕುಮಾರಿ, ಸಮೀವುಲ್ಲಾ, ಮಹಮ್ಮದ್ ರಫೀಕ್, ಕೆ.ವಿ. ಶ್ರೀಧರ್, ಎಸ್. ಸಾತ್ವೀಕ್ ಅವಿರೋಧವಾಗಿ ಆಯ್ಕೆಗೊಂಡರು.

ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿ ಸದಸ್ಯರಾಗಿ ಪುಷ್ಪಲತಾ ಜಗನ್ನಾಥ್, ಎಂ.ಎಸ್. ಶೋಭಾ, ಅಯೂಬ್ ಖಾನ್, ವಿ. ರಮೇಶ್, ಶ್ರೀನಿವಾಸ್, ಶಾರದಮ್ಮ, ಎನ್. ಸೌಮ್ಯ ಅವಿರೋಧವಾಗಿ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net