ಪಾಲಿಕೆ ಅಧಿಕಾರಿಗಳಿಂದ ಜನಸ್ಪಂದನೆ

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು
ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ನಗರ ಪಾಲಿಕೆ ಸದಸ್ಯರು ಪ್ರತಿನಿತ್ಯ ನಿರ್ವಹಿಸುತ್ತಿದ್ದರು. ಆದರೆ, ಇದೀಗ ನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಹೊತ್ತುಕೊಂಡಿದ್ದಾರೆ.

ವಾರ್ಡ್‌ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಜನರು ಈ ಸಮಸ್ಯೆಗಳನ್ನು ನಗರ ಪಾಲಿಕೆ ಸದಸ್ಯರ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಸಿಕೊಳ್ಳುತ್ತಿದ್ದರು. ಆದರೆ, ನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ನವೆಂಬರ್ 16ಕ್ಕೆ ಮುಕ್ತಾಯಗೊಂಡ ನಂತರ ಅವರಿಗೆ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳು ವಾರ್ಡ್ ಭೇಟಿ ಪ್ರಾರಂಭಿಸಿದ್ದಾರೆ. ಅಲ್ಲದೆ, ಸಮಸ್ಯೆಗಳಿಗೆ ತುರ್ತು ಪರಿಹಾರ ಪಡೆಯಲು ಜನರು ಸಹಾಯವಾಣಿಗೆ ಕರೆ ಮಾಡಬಹುದು. ಇದಕೋಸ್ಕರ ನಗರ ಪಾಲಿಕೆ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಜನರಿಗೆ ನೀಡಲಾಗಿದೆ.

ನೀರು ಸರಬರಾಜು, ಒಳಚರಂಡಿ, ಬೀದಿದೀಪ, ಸ್ವಚ್ಛತೆ, ರಸ್ತೆ ದುರಸ್ತಿ, ಜನನ-ಮರಣ ಪ್ರಮಾಣ ಪತ್ರ, ಖಾತಾ, ಕಂದಾಯ, ಕಟ್ಟಡ ರಹದಾರಿ, ಉದ್ದಿಮೆ ರಹದಾರಿ ಹಾಗೂ ಇತರೆ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ಗೊಂದಲ, ಸಮಸ್ಯೆಗಳು ಕಂಡುಬಂದರು ಜನರು ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು.

ವಲಯ ಕಚೇರಿ ಅಧಿಕಾರಿಗಳು ಪ್ರತಿ ವಾರ ಒಂದೊಂದು ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಒಂಬತ್ತು ವಲಯ ಕಚೇರಿಗಳು ಇದ್ದು, ಈ ಒಂಬತ್ತು ವಲಯ ಕಚೇರಿಗಳ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಒಂದೊಂದು ವಾರ್ಡ್‌ಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಪ್ರತಿವಾರ ನಗರದ 9 ವಾರ್ಡ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಗಳನ್ನು ಆಲಿಸಿದಂತೆ ಆಗುತ್ತದೆ.

ನಗರ ಪಾಲಿಕೆ ಚುನಾವಣೆಯನ್ನು ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಚುನಾವಣೆಯನ್ನು ಮುಂದೂಡುವ ಆಲೋಚನೆಯಲ್ಲಿ ಸರ್ಕಾರ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಧಿಕಾರಾವಧಿ 2024ರ ಜೂನ್ 16 ರಂದು ಮುಕ್ತಾಯಗೊಳ್ಳಲಿದ್ದು, ಮೇ ಅಥವಾ ಜೂನ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ 8-10 ತಿಂಗಳು ಕಳೆದ ನಂತರ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳ ತಂಡ ಸಜ್ಜುಗೊಂಡಿದೆ.

ಕರೆ ಮಾಡಬೇಕಾದ ಸಂಖ್ಯೆ: ವಲಯ ಕಚೇರಿ-1ಕ್ಕೆ ಸಂಬಂಧಿಸಿದಂತೆ 98861 14076 ಅಥವಾ 94486 66380, ವಲಯ ಕಚೇರಿ-2 ವ್ಯಾಪ್ತಿಯ ಜನರು ಮೊ: 99452 66195, 90080 71575, ವಲಯ ಕಚೇರಿ-3 ಮೊ: 99455 66213, 99455 66213, ವಲಯ ಕಚೇರಿ-4 ಮೊ:94493 38536, 96118 79547, ವಲಯ ಕಚೇರಿ-5 ಮೊ: 99642 94041, 99808 09996, ವಲಯ ಕಚೇರಿ-6 ಮೊ: 99646 58738, 78924 68388, ವಲಯ ಕಚೇರಿ-7 ಮೊ: 74061 27698, 97319 26176, ವಲಯ ಕಚೇರಿ-8 ಮೊ: 77955 76333, 94807 68828, ವಲಯ ಕಚೇರಿ-9 ಮೊ: 99006 84767, 72047 96331 ಅವರನ್ನು ಸಂಪರ್ಕಿಸಹುದು. ನಗರ ಯೋಜನಾ ವಿಭಾಗಕ್ಕೆ ಸಂಬಂಧಿಸಿದಂತೆ ಮೊ:98804 80015, 97383 24154, ಬೀದಿದೀಪ ನಿರ್ವಹಣೆ ಮೊ:99455 66213, 70199 77184, ಸ್ಟ್ರೀಟ್ ಲೈಟ್ ಇ-ಸ್ಮಾರ್ಟ್ ಕಂಟ್ರೋಲ್ ರೂಂ ಟೋಲ್ ಫ್ರೀ ನಂಬರ್ 1800425525, ಮೊ:82770 68000, ನಿಯಂತ್ರಣ ಕೊಠಡಿ ಸಹಾಯವಾಣಿ ಮೊ:94498 41195, 94498 41196, ದೂ:0821-2440890, 0821-2418800 ಸಂಪರ್ಕಿಸಬಹುದು. ನೀರು ಸಬರಾಜು ಹಾಗೂ ಒಳಚರಂಡಿ ಸಮಸ್ಯೆಗಳು ಕಂಡು ಬಂದರೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಬಿ.ಎ. ಧನುಷ್ (ಪೂರ್ವ) ಮೊ:80731-71447, ನಂಜರಾಜೇಗೌಡ (ಪೂರ್ವ) ಮೊ:99166 31092, ಮೊಹಮ್ಮದ್ ಮುಸ್ತಫ (ಪಶ್ಚಿಮ) ಮೊ: 95355 25049, ಸೋಮಶೇಖರ್ (ಪಶ್ಚಿಮ) ಮೊ: 96862 37138 ಸಂಪರ್ಕಿಸಬಹುದು.

ಜನರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ವಲಯ ಕಚೇರಿ ಅಧಿಕಾರಿಗಳ ಸಂಖ್ಯೆಗಳನ್ನು ಜನರಿಗೆ ನೀಡಲಾಗಿದೆ. ಅಲ್ಲದೆ, ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಸಂಖ್ಯೆಯನ್ನು ನೀಡಲಾಗಿದೆ. ಕುಡಿಯುವ, ನೀರು, ಸ್ವಚ್ಛತೆ, ರಸ್ತೆ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳು ವಾರ್ಡ್ ವ್ಯಾಪ್ತಿಯಲ್ಲಿ ಕಂಡುಬಂದರೆ ಜನರು ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊ ಳ್ಳಬಹುದು. ಅಲ್ಲದೆ, ಅಧಿಕಾರಿಗಳ ತಂಡ ಖುದ್ದಾಗಿ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳನ್ನು ಪಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.
ಅಸಾದ್ ಉರ್ ರೆಹಮಾನ್ ಷರೀಫ್, ನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net