ಮೈಸೂರು ನಗರದಲ್ಲಿ 400 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದ ಪಾಲಿಕೆ

mcc
Published on

ಮೈಸೂರು: ನಗರದ ಗೋದಾಮು ಒಂದರ ಮೇಲೆ ಮಂಗಳವಾರ ದಾಳಿ ನಡೆಸಿದ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಕೆ.ಆರ್. ಪೊಲೀಸರು 400 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದು ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ.

ನಗರದ ಬಸವೇಶ್ವರ ರಸ್ತೆಯ ಗೋದಾಮು ಒಂದರ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜು ನೇತೃತ್ವದಲ್ಲಿ ದಾಳಿ ನಡೆಯಿತು. ಮಾರಾಟಕ್ಕೆ ಇಡಲಾಗಿದ್ದ ವಿವಿಧ ಬಗೆಯ 400 ಕೆ.ಜಿ. ಪ್ಲಾಸ್ಟಿಕ್‌ಅನ್ನು ವಶಕ್ಕೆ ಪಡೆಯಲಾಯಿತು.

ಶನಿವಾರ ಸಹ ನಗರ ಪಾಲಿಕೆಯ ಅಧಿಕಾರಿಗಳ ತಂಡ ಶಿವರಾಮಪೇಟೆಯ ವಿವಿಧ ಗೋದಾಮುಗಳ ಮೇಲೆ ದಾಳಿ ನಡೆಸಿ 1,200 ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದರು. ಈ ವೇಳೆ ಪಾಲಿಕೆ ವಲಯ ಆಯುಕ್ತೆ ಜ್ಯೋತಿ, ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್, ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net