ಮೈಸೂರಿನಲ್ಲಿ 19 ವರ್ಷಗಳ ಬಳಿಕ ಮಳಿಗಳ ಬಾಡಿಗೆ ದರ ಪರಿಷ್ಕರಣೆಗೆ ನಿರ್ಧಾರ

mcc
Published on

ಮೈಸೂರು: ನಗರ ಪಾಲಿಕೆಯು 19 ವರ್ಷಗಳ ಬಳಿಕ ನಗರದಲ್ಲಿ ವಿವಿಧ ಮಳಿಗೆಗಳ ಬಾಡಿಗೆ ದರವನ್ನು ಪರಿಷ್ಕರಿಸುವ ನಿರ್ಧಾರ ಕೈಗೊಂಡಿದೆ.

ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಳಿಗೆಗಳ ಬಾಡಿಗೆ ದರ ಪರಿಷ್ಕರಿಸಲು ತೀರ್ಮಾನಿಸಲಾಯಿತು. ನಗರ ಪಾಲಿಕೆಗೆ ಸೇರಿದ ದೇವರಾಜ ಮಾರುಕಟ್ಟೆ, ವಿಶ್ವೇಶ್ವರಯ್ಯ ಭವನ, ಧನ್ವಂತ್ರಿ ರಸ್ತೆ ಮಳಿಗೆಗಳು, ಲ್ಯಾನ್ಸ್‌ಡೌನ್ ಕಟ್ಟಡ, ಕಾಳಿದಾಸ ರಸ್ತೆ ಮಳಿಗೆಗಳು, ಹಳೇ ಬಸ್‌ನಿಲ್ದಾಣ ರಸ್ತೆ ಮಳಿಗೆಗಳು, ಜಯಲಕ್ಷ್ಮೀಪುರಂ ಮಳಿಗೆಗಳು, ಮೇಟಗಳ್ಳಿ ಮಳಿಗೆಗಳು, ಬಿಡಾರ ಕೃಷ್ಣಪ್ಪ ಮಳಿಗೆಗಳು, ಕುಂಬಾರಕೊಪ್ಪಲು ಮಳಿಗೆಗಳು, ಮಂಡಿಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಗುಜರಿ ಮಳಿಗೆಗಳು, ನೆಲಬಾಡಿಗೆ ಜಾಗದ ದರ ಪರಿಷ್ಕರಣೆ ಮಾಡಲು ಕೌನ್ಸಿಲ್ ಸಭೆಗೆ ಒಪ್ಪಿಗೆ ಸೂಚಿಸಿತ್ತು.

19 ವರ್ಷಗಳ ಹಿಂದೆ ದರ ಪರಿಷ್ಕರಣೆ ಮಾಡಲಾಗಿತ್ತು. ಅದಾದ ನಂತರ ವಿವಿಧ ಕಾರಣಗಳಿಗೆ ದರ ಪರಿಷ್ಕರಣೆಯಾಗಿರಲಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿಯ ಮಾರ್ಗಸೂಚಿ ದರ (ಎಸ್‌ಆರ್ ವ್ಯಾಲ್ಯೂ) ಹಾಗೂ ಮಾರುಕಟ್ಟೆಯ ವಿಸ್ತೀರ್ಣ, ಮಾರುಕಟ್ಟೆಯ ಮೌಲ್ಯವನ್ನು ಆಧರಿಸಿ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net