

ಮೈಸೂರು: ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಚಂಪಕ ರಾಷ್ಟ್ರೀಯ ಕಲಾ ಉತ್ಸವ ಸರಣಿಯ ‘ಮಾಘ ಮತ್ತು ಫಾಲ್ಗುಣ’ ಆವೃತ್ತಿಯನ್ನು ರಾಮಕೃಷ್ಣ ನಗರದ ಚಂಪಕ ಅಕಾಡೆಮಿಯ ಚಂಪಕ ಸಭಾಂಗಣದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಜಯಲಕ್ಷ್ಮೀಪುರಂ, ಹೆಬ್ಬಾಳ, ಗೋಕುಲಂ ಮತ್ತು ಶ್ರೀನಗರ ಕೇಂದ್ರಗಳಲ್ಲಿ ಭರತನಾಟ್ಯಂ ಕಲಿಯುತ್ತಿರುವ ಚಂಪಕ ಅಕಾಡೆಮಿಯ ಉದಯೋನ್ಮುಖ ವಿದ್ಯಾರ್ಥಿಗಳಿಂದ ಆರಂಭ ನೃತ್ಯ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ಡಾ. ನಾಗಲಕ್ಷ್ಮೀ ಮತ್ತು ಅವರ ಶಿಷ್ಯರಿಂದ ಶಿವಶರಣರ ವಚನಗಳ ವಚನ ನೃತ್ಯ ಸೌರಭ ಭರತನಾಟ್ಯ ಪ್ರದರ್ಶನ ನಡೆಯಿತು.
ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರಾಧ್ಯಕ್ಷ ಮ.ಗು. ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ಡಾ. ಎಚ್. ಮುದ್ದುಮಲ್ಲೇಶ್, ಚಂದ್ರಕಲಾ ಶಿವಪ್ರಕಾಶಮೂರ್ತಿ ಇತರರು ಇದ್ದರು.