ಮೈಸೂರು ಬಾಲಕ, ಬಾಲಕಿಯರ ತಂಡ ಚಾಂಪಿಯನ್

29 MYS 1
ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೈಸೂರಿನ ಬಾಲಕರ ತಂಡದೊಂದಿಗೆ ತಂಡದ ಕೋಚ್ ಹೇಮಂತ್ ಕುಮಾರ್, ಯೋಗಶ್ರೀ ಇದ್ದರು.
Published on

ಮೈಸೂರು: ಬೆಂಗಳೂರಿನಲ್ಲಿ ಆಯೋಜಿಸಿದ್ದ ಜೂನಿಯರ್ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೈಸೂರು ಬಾಲಕ ಹಾಗೂ ಮೈಸೂರು ಬಾಲಕಿಯರ ತಂಡ ಕ್ರಮವಾಗಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು.

ಮೈಸೂರು ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್, ಕರ್ನಾಟಕ ಅಮೆಚೂರ್ ಥ್ರೋಬಾಲ್ ಅಸೋಸಿಯೇಷನ್‌ನಿಂದ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಅನ್‌ಪ್ರಿಡಿಟ್ಟಾ ಬ್ಲೈ ತಂಡವನ್ನು 25-

15, 25-09(2-0) ಸೆಟ್‌ನಲ್ಲಿ ಸೋಲಿಸಿ ಮೈಸೂರು ಬಾಲಕರ ತಂಡ ಪ್ರಥಮ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಬಿಎಂಎಸ್ ತಂಡವನ್ನು 25-19, 25-16(2-0) ಸೆಟ್‌ನಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net