ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜನರಿಗೆ ನೆರವು ನೀಡಲು ಮುಂದಾದ ಮೈಸೂರು ಬಿಜೆಪಿ ಕಾರ್ಯಕರ್ತರು

IMG-20201022-WA0009
Published on

ಮೈಸೂರು: ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ ಉತ್ತರ ಕರ್ನಾಟಕದ ನೆರೆ ಪ್ರವಾಹ  ಸಂತ್ರಸ್ತರಿಗೆ ದಿನನಿತ್ಯ ಬಳಸುವಂತ ಸಾಮಗ್ರಿಗಳನ್ನು ಪೂರೈಸುವ ಕಾರ್ಯಕ್ಕೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಚಾಲನೆ ನೀಡಿದರು. 

ಈ ಕಾರ್ಯಕ್ರಮವನ್ನು ಮುಂದಿನ ಎರಡು ದಿನಗಳ ಕಾಲ ಪದಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಮೈಸೂರು ನಗರ ಹಾಗೂ ಜಿಲ್ಲಾ ಅಧ್ಯಕ್ಷರು ಕ್ಷೇತ್ರ ಅಧ್ಯಕ್ಷರುಗಳ ನೇತೃತ್ವದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ಅದನ್ನು ಕ್ರೂಡೀಕರಿಸಿ ವಾಹನದ ಮುಖಾಂತರ ಉತ್ತರ ಕರ್ನಾಟಕಕ್ಕೆ ಸಂತ್ರಸ್ತರ ಮನೆ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದನ್ನು ಜಿಲ್ಲೆಗಳು ಗ್ರಾಮಗಳಿಗೆ ಬಿಜೆಪಿ ಯುವ ಮೋರ್ಚ ಅಧ್ಯಕ್ಷರುಗಳ ನೇತೃತ್ವದಲ್ಲಿ ವಿತರಣೆ ಮಾಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ ಮೊದಲನೆಯದಾಗಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಮೈಸೂರಿನ ಬಿಜೆಪಿ ಮುಖಂಡರುಗಳು ಕಾರ್ಯಕರ್ತರು ಸಹಾಯವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತೇವೆ ಎಂದು ಶ್ರೀವತ್ಸ ಮನವಿ ಮಾಡಿದರು.

ಈ ಸಂದರ್ಭ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಾಣಿಶ್, ಸೋಮಸುಂದರ್, ಗಿರಿಧರ್, ಬಿ‌ಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರುಗಳಾದ ಧೀರಜ್ ಪ್ರಸಾದ್, ಜೈಶಂಕರ್ ,ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ, ಗ್ರಾಮಾಂತರ ಅಧ್ಯಕ್ಷರಾದ ವಿಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್, ಭರತ್, ನಗರ ಉಪಾಧ್ಯಕ್ಷರುಗಳಾದ ಕಾರ್ತಿಕ್ ,ಸಚಿನ್, ನಿಶಾಂತ್, ನಗರ ಕಾರ್ಯದರ್ಶಿಗಳಾದ ಹರ್ಷ ನಗರ ಕಾರ್ಯಕಾರಣಿ ಸದಸ್ಯರಾದ ರಾಘವೇಂದ್ರ ,ಕಿರಣ್ ,ಆನಂದ ಕ್ಷೇತ್ರದ ಅಧ್ಯಕ್ಷರುಗಳಾದ ಸಚಿನ್.ಆರ್, ಮನು ಪ್ರಸಾದ್, ಹೇಮಂತ್ ಗೌಡ ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net