ದೇಶ-ಧರ್ಮಗಳಲ್ಲಿ  ಒಡಕು ಹುಟ್ಟಿಸುವವರ ವಿರುದ್ಧ ಜಾಗೃತರಾಗಲು ಪೇಜಾವರ ಶ್ರೀ ಕರೆ

udp-pejavara sri
Published on

ಉಡುಪಿ: ಸನಾತನ ಧರ್ಮೀಯರೇ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ ಆ ಸನಾತನ ಧರ್ಮವನ್ನೇ ಕಿತ್ತೊಗೆಯಬೇಕು ಎನ್ನುವ ಮೂಲಕ ಭಾರತವನ್ನು ಛಿದ್ರ ಮಾಡಲು ಹೊರಟಿರುವ ಅಥವಾ ಅವರನ್ನು ಬೆಂಬಲಿಸುವ ಯಾವುದೇ ರಾಜಕೀಯ ಅಥವಾ ದೇಶದ್ರೋಹಿ ಶಕ್ತಿಗಳ ವಿರುದ್ಧ ಜಾಗೃತರಾಗಿದ್ದು ಸಂದರ್ಭ ಬಂದಾಗ ಅಂಥವರಿಗೆ  ಅವಶ್ಯವಾಗಿ ಪಾಠ ಕಲಿಸಬೇಕು. ಅದಕ್ಕಾಗಿ ಸಮಸ್ತ ಹಿಂದೂ ಸಮಾಜ ಸದಾ ಜಾಗೃತರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ ‌

ಭಾನುವಾರ ಶ್ರೀ ಗಣಪತಿ ಸಚ್ಚಿದಾನದಂದ ಆಶ್ರಮದ ಸಭಾಂಗಣದಲ್ಲಿ ಚಾತುರ್ಮಾಸ್ಯವ್ರತ ಸಮಿತಿ ಮತ್ತು ವಿಶ್ವಹಿಂದು ಪರಿಷತ್ ಮೈಸೂರು ಜಿಲ್ಲೆ ಮತ್ತು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆಶ್ರಯದಲ್ಲಿ ನಡೆದ ಸಂತ ಸಮಾವೇಶ ಮತ್ತು ಬೃಹತ್ ಧರ್ಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು . 

ಸುಮಾರು 30 ಕ್ಕೂ ಅಧಿಕ ವಿವಿಧ ಮಠಾಧೀಶರು ಸಾಧು ಸಂತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ  ಹಿಂದು ಅಜ ಎದುರಿಸುತ್ತಿರುವ ಗೋಹತ್ಯೆ ಲವ್ ಜಿಹಾದ್ ಕೌ ಜಿಹಾದ್ ಜಾತ್ರಾ ಜಿಹಾದ್ ಮತಾಂತರ , ಸಾಮಾಜಿಕ ಜಾಲತಾಣಗಳಿಂದಾಗಿ ಸಂಸ್ಕೃತಿಯ ಮೇಲಾಗುತ್ತಿರುವ ಅನಾಹುತ , ಮೊದಲಾದ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಾಗೃತಿಯ ಸಂದೇಶ ನೀಡಿದರು . 

ಆಶ್ರಮದ ವೇದ ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಆರಂಭವಾದ ಧರ್ಮಸಭೆಯಲ್ಲಿ  ಚಾತುರ್ಮಾಸ್ಯ ಸಮಿತಿಯ ಎಂ‌.ಕೆ ಪುರಾಣಿಕ್ ಸ್ವಾಗತಿಸಿದರು. ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಎಂ ಬಿ ಪುರಾಣಿಕ್ ಪ್ರಸ್ತಾವನೆಗೈದರು . ವಿದ್ವಾನ್ ಬಿ.ಎನ್ ವಿಜಯೀಂದ್ರಾಚಾರ್ಯ ಕಾರ್ಯಕ್ರಮ‌ ನಿರೂಪಿಸಿ ವಂದಿಸಿದರು. ವಿಶ್ವಹಿಂದು ಪರಿಷತ್ ಮೈಸೂರು ಜಿಲ್ಲಾ ಉಪಾಧ್ಯಕ್ಷ ಜಗದೀಶ ಹೆಬ್ಬಾರ್ ನಿರ್ಣಯ ಮಂಡಿಸಿದರು. ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ  ರವಿಶಾಸ್ರ್ತಿ , ವಿಹಿಂಪ ಜಿಲ್ಲಾಧ್ಯಕ್ಷ ಪ್ರಶಾಂತ್ , ಆಶ್ರಮದ ಪ್ರಧಾನ ವ್ಯವಸ್ಥಾಪಕ ಹೆಚ್ .ವಿ ಪ್ರಸಾದ್, ವಿಹಿಂಪ  ವಿಭಾಗ ಸಂಯೋಜಕಿ ಸವಿತಾ ಘಾಟ್ಗೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net