

ಮೈಸೂರು: ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಅಧಿಕಾರಿಯನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಕಲ್ಪನಾ ಆದೇಶ ಹೊರಡಿಸಿದ್ದಾರೆ.
ಮೈಸೂರು ತಾಲೂಕಿಗೆ ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್, ಹುಣಸೂರು ತಾಲೂಕಿಗೆ ನಗರ ಪಾಲಿಕೆ ವಲಯ ಆಯುಕ್ತೆ ವೈ.ಎನ್. ಚಂದ್ರಮ್ಮ, ನಂಜನಗೂಡು ತಾಲೂಕಿಗೆ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಎಚ್.ಡಿ. ಕೋಟೆಗೆ ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಆರ್. ಕವಿತಾ ರಾಣಿ, ಪಿರಿಯಾಪಟ್ಟಣಕ್ಕೆ ರಾಜ್ಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಪಿ.ಎಸ್. ನಾಗಪ್ರಶಾಂತ್, ಸರಗೂರಿಗೆ ಸ್ಥಳ ನಿರೀಕ್ಷೆಯಲ್ಲಿರುವ ಕೆಎಎಸ್ ಅಧಿಕಾರಿ ಸಯಿದಾ ಆಯಿಷಾ, ಸಾಲಿಗ್ರಾಮ ತಾಲೂಕಿಗೆ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಎಸ್.ಜೆ. ಹರ್ಷವರ್ಧನ ಅವರನ್ನು ನೇಮಕ ಮಾಡಲಾಗಿದೆ.