

ಮೈಸೂರು: ಜಿಲ್ಲಾ ಪಂಚಾಯತ್ ಹಾಗೂ ರೇಷ್ಮೆ ಉಪ ನಿರ್ದೇಶಕರ ಕಚೇರಿ ವತಿಯಿಂದ ರೇಷ್ಮೆ ಇಲಾಖೆಯು 2021-22ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಪ್ರಗತಿಪರ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಬೆಳೆಗಾರರು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 15 ರೊಳಗಾಗಿ ಆಯಾ ರೇಷ್ಮೆ ವಿಸ್ತರಣಾಧಿಕಾರಿ/ರೇಷ್ಮೆ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿದಾರರು ಕನಿಷ್ಟ 1.00 ಎಕರೆ ಹಿಪ್ಪುನೇರಳೆ ವಿಸ್ತೀರ್ಣ ಹಾಗೂ ಪ್ರತ್ಯೇಕ ಹುಳು ಸಾಕಾಣಿಕಾ ಮನೆ ಹೊಂದಿದ್ದು, 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ 65 ಕೆ.ಜಿಗಿಂತ ಕಡಿಮೆ ಇರಬಾರದು. 1 ಎಕರೆಗೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆ.ಜಿ.ಗಿಂತ ಕಡಿಮೆ ಇರಬಾರದು. ಕನಿಷ್ಟ ಎರಡು ದ್ವಿತಳಿ ಬೆಳೆ ಬೆಳೆದಿರಬೇಕು.
ಆಸಕ್ತರು ತಮ್ಮ ರೇಷ್ಮೆ ಪಾಸ್ ಪುಸ್ತಕ, ರೇಷ್ಮೆ ಮೊಟ್ಟೆ ಚಾಕಿ ಖರೀದಿ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಎಸ್.ಕೆ. ಮಂಜುಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.