

ಮೈಸೂರು: ನಾಡಹಬ್ಬ ದಸರಾ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರವನ್ನು ‘ಅಂಬಾರಿ ’ ಡಬಲ್ ಡೆಕ್ಕರ್ ಬಸ್ ಮೂಲಕ 9 ಸಾವಿರ ಜನರು ವೀಕ್ಷಿಸಿದ್ದು, 28 ಲಕ್ಷ ರೂ. ಸಂಗ್ರಹವಾಗಿದೆ.
ಎಂದಿನಂತೆ ಈ ಬಾರಿಯೂ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಣಿಸಲು ಜನರು ಮುಗಿ ಬಿದ್ದರು. ಸಾಕಷ್ಟು ಜನರಿಗೆ ಟಿಕೆಟ್ ದೊರೆಯದೆ ನಿರಾಶೆ ಅನುಭವಿಸಿದರು. ಅಂಬಾರಿ ಬಸ್ ಸೆ.24 ರಿಂದ ಅ.12ರವರೆಗೆ ನಗರದಲ್ಲಿ ಸಂಚರಿಸಿತು. ಈ ಅವಧಿಯಲ್ಲಿ ಒಟ್ಟು 9,121 ಜನರಿಗೆ ಈ ಬಸ್‌ನಲ್ಲಿ ಪ್ರಯಣಿಸಲು ಅವಕಾಶ ದೊರೆತ್ತಿದೆ.
ಮೇಲಿನ ಆಸನದಲ್ಲಿ 5,412 ಹಾಗೂ ಕೆಳಗಿನ ಆಸನದಲ್ಲಿ 3,709 ಜನರು ಪ್ರಯಣಿಸಿದರು. ಮೇಲಿನ ಆಸನಕ್ಕೆ 350 ರೂ., ಕೆಳಗಿನ ಆಸನಕ್ಕೆ 250 ರೂ. ದರ ನಿಗದಿ ಪಡಿಸಲಾಗಿತ್ತು. ಒಟ್ಟು 28,21,450 ರೂ. ಸಂಗ್ರಹವಾಗಿದೆ.
ದಸರಾ ದೀಪಾಲಂಕಾರ ವೀಕ್ಷಿಸಲು ಸಾಂಸ್ಕೃತಿಕ ನಗರಿಗೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಸಾಕಷ್ಟು ಜನರು ಖಾಸಗಿ ವಾಹನಗಳಲ್ಲಿ ತೆರಳಿ ದೀಪಾಲಂಕಾರ ವೀಕ್ಷಿಸುತ್ತಾರೆ. ಸಾಕಷ್ಟು ಜನರು ಡಬಲ್ ಡೆಕ್ಕರ್ ಬಸ್‌ನಲ್ಲಿ ತೆರಳಿ ದೀಪಾಲ ಂಕಾರವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಈ ಬಾರಿಯೂ ಅಂಬಾರಿ ಬಸ್ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯ ಜನರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.