ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ : 75 ಕೋಟಿ ರೂ.ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

Mysore Airport
Published on

ಮೈಸೂರು: ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆಗೆ ಅಗತ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದಿಂದ 75 ಕೋಟಿ ರೂ. ಅನುದಾನ ಬುಧವಾರ ಬಿಡುಗಡೆಯಾಗಿದೆ.

ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆಗೆ ಒಟ್ಟು 319 ಕೋಟಿ ರೂ. ಮಂಜೂರಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಮೊದಲನೇ ಕಂತಿನಲ್ಲಿ 50 ಕೋಟಿ ರೂ. ಹಾಗೂ 2ನೇ ಕಂತಿನಲ್ಲಿ 100 ಕೋಟಿ ರೂ.ಅನುದಾನ ಬಿಡುಗಡೆಯಾಗಿತ್ತು. ಇದೀಗ 3ನೇ ಕಂತಿನಲ್ಲಿ 75 ಕೋಟಿ ರೂ. ಬಿಡುಗಡೆಯಾಗಿದೆ.

ಪ್ರಸ್ತುತ ರನ್‌ವೇ 1.75 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ರನ್‌ವೇಯನ್ನು 1.75 ಕಿ.ಮೀ.ನಿಂದ 2.75 ಕಿ.ಮೀ. ವಿಸ್ತರಿಸಲಾಗು ವುದು. 2.75 ಕಿ.ಮೀ. ರನ್‌ವೇ ವಿಸ್ತರಣೆಗೆ ಒಟ್ಟು 240 ಎಕರೆ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಬಿಡುಗಡೆಯಾದ 150 ಕೋಟಿ ರೂ. ಅನುದಾನದಲ್ಲಿ 160 ಎಕರೆ ಖಾಸಗಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 46.22 ಎಕರೆ ಖಾಸಗಿ ಜಾಗದ ಭೂ ಸ್ವಾಧೀನಕ್ಕೆ 90 ಕೋಟಿ ರೂ. ಅವಶ್ಯಕತೆ ಇದೆ. 240 ಎಕರೆ ಪೈಕಿ ಉಳಿದ ಜಾಗವು ಸರ್ಕಾರಿ ಭೂಮಿಯಾಗಿದೆ. ಪ್ರತಿ ಎಕರೆಗೆ 1.50 ಕೋಟಿ ರೂ.ಪರಿಹಾರ ನೀಡಲಾಗು ವುದು. ರನ್‌ವೇ ವಿಸ್ತರಣೆಗೆ ಗುರುತಿಸಿರುವ ಜಾಗದಲ್ಲಿ ಕಾಲುವೆ ಹಾದು ಹೋಗಿದ್ದು, ಅದಕ್ಕೆ ಪರಿಹಾರವಾಗಿ 76 ಕೋಟಿ ರೂ., ಕೆಪಿಟಿಸಿಎಲ್‌ಗೆ 68 ಕೋಟಿ ರೂ. ಪರಿಹಾರ ನೀಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net