

ಮೈಸೂರು: ಕಳೆದ ಒಂದು ತಿಂಗಳ ಅವಧಿಯಲ್ಲಿ 9 ಸಾವಿರ ಇ ಆಸ್ತಿ ನೀಡಲಾಗಿದ್ದು, ಇದೇ ವೇಗದಲ್ಲಿ ಮುಂದುವರೆದರೆ ಒಂದೂವರೆ ವರ್ಷದೊಳಗೆ ನಗರದ ಎಲ್ಲ ಆಸ್ತಿಗಳಿಗೆ ಇ-ಆಸ್ತಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು.
ನಗರ ಪಾಲಿಕೆಯಲ್ಲಿ ಶನಿವಾರ ಬಿ ಖಾತಾ ಅಭಿಯಾನಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇ-ಆಸ್ತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು. ಆದರೆ, ಅದಕ್ಕೆ ಮಾನವ ಸಂಪನ್ಮೂಲ, ಕಂಪ್ಯೂಟರ್, ಸ್ಕಾೃನ್ಗಳ ಅವಶ್ಯಕತೆ ಇದೆ. ಈಗ ಇರುವ ಮಾನವ ಸಂಪನ್ಮೂಲ ಬಳಸಿಕೊಂಡು ಅತ್ಯಂತ ವೇಗವಾಗಿ ಇ-ಆಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.