ಮೈಸೂರು ಭೀಕರ ಅಪಘಾತ : ಬಸ್ ಚಾಲಕ ಬಂಧನ

mys accident
Published on

ಮೈಸೂರು: ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ತಿ.ನರಸೀಪುರ ತಾಲೂಕಿನ ಬಾಗಳಿ ಗ್ರಾಮದ ನಿವಾಸಿ ದಿಲೀಪ್ (26) ಬಂಧಿತ ಚಾಲಕ. ಸೋಮವಾರ ಇನ್ನೋವಾ-ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಳ್ಳಾರಿ ಮೂಲದ 9 ಹಾಗೂ ಶ್ರೀರಂಗಪಟ್ಟಣದ ಇನ್ನೋವಾ ಚಾಲಕ ಸೇರಿ ಒಟ್ಟು 10 ಜನರು ಮೃತಪಟ್ಟಿದ್ದರು.

ಆರೋಪಿಯನ್ನು ಸೋಮವಾರ ರಾತ್ರಿ ಜೆಎಂಎ್ಸಿ ನ್ಯಾಯಾೀಶರ ಬಳಿ ಕರೆದೊಯ್ದು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net