ರೈತರಿಂದ ಖರೀದಿಸುವ ಹಾಲಿನ ದರ ಇಳಿಸಿದ ಮೈಮುಲ್

Nandini
Published on

ಮೈಸೂರು: ಗ್ರಾಹಕರು ಖರೀದಿಸುವ ಹಾಲಿನ ದರ ಆ.1 ರಿಂದ ಅನ್ವಯ ಆಗುವಂತೆ ಏರಿಕೆ ಕಾಣಲಿದ್ದು, ಇದರ ಜತೆಗೆ ರೈತರಿಂದ ಮೈಸೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಮೈಮುಲ್) ಈಗಾಗಲೇ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿದ್ದು, ಸರ್ಕಾರ ಹಾಗೂ ಮೈಮುಲ್ ನಿರ್ಧಾರದಿಂದ ರೈತರು ಹಾಗೂ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಆ.1 ರಿಂದ ಅನ್ವಯ ಆಗುವಂತೆ ಗ್ರಾಹಕರು ಖರೀದಿಸುವ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳವಾಗಲಿದೆ. ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1.50 ರೂ. ಕಡಿಮೆ ಮಾಡಲಾಗಿದೆ. ಜು.20 ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳ ಲಾಗಿದ್ದು, ಈಗಾಗಲೇ ದರ ಕಡಿತ ಜಾರಿಗೊಂಡಿದೆ.

‘ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯ ಬೇಡಿಕೆ ಹೆಚ್ಚಾಗಿಲ್ಲ. ಈ ಹಿನ್ನೆಲೆಯಲ್ಲಿ ನಷ್ಟವನ್ನು ಸರಿದೂಗಿಸಲು ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡಲಾಗಿದೆ. ಆ.1 ರಿಂದ ಗ್ರಾಹಕರು ಖರೀದಿಸುವ ಹಾಲಿನ ದರ 3 ರೂ. ಹೆಚ್ಚಳ ಮಾಡಲಾಗಿದ್ದು, ಆ ಹಣವನ್ನು ರೈತರಿಗೆ ನೀಡಲಾಗುವುದು. ಹಾಲಿನ ಉತ್ಪಾದನೆ ಹೆಚ್ಚಾದಾಗ ಖರೀದಿ ದರ ಕಡಿತ ಮಾಡುವುದು ಸಹಜ ಪ್ರಕ್ರಿಯೆ’ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net