

ಧಾರವಾಡ: ಗುಲಗಂಜಿಕೊಪ್ಪ ಹೊಸ ಓಣಿಯ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ಅ. 23ರಂದು ಜರುಗಲಿದೆ. ಅಂದು ಬೆಳಗ್ಗೆ 6.30ಕ್ಕೆ ಅಭಿಷೇಕ, ಪೂಜೆ, ಮಂಗಳಾರತಿ. ಮಧ್ಯಾಹ್ನ 12.30ಕ್ಕೆ ಪಲ್ಲಕ್ಕಿ ಸೇವೆ, ಕುದುರೆಕಾರರ ಸೇವೆ, ಡೊಳ್ಳಿನ ಸೇವೆ, ಸರಪಳಿ ಸೇವೆ, ಶಸ್ತ್ರ ಸೇವೆ ನಡೆಯಲಿವೆ. ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಮುಖ್ಯ ಅರ್ಚಕ ಮಲ್ಲೇಶಪ್ಪ ಜಾಧವ ತಿಳಿಸಿದ್ದಾರೆ.