ಮೈಲಾರ ಪಿಡಿಒನಿಂದ ವಿನಾಕಾರಣ ಕಿರುಕುಳ

hadagali mylara protest
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಪಂ ಪಿಡಿಒ ವಿರುದ್ಧ ಸಿಬ್ಬಂದಿ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಶೇಖಪ್ಪ ಉದ್ಗಟ್ಟಿ, ಉಚ್ಚಂಗೆಪ್ಪ, ರಾಮಪ್ಪ ಬಾರ್ಕಿ, ಮಂಜುನಾಯ್ಕ ಲಂಬಾಣಿ, ಎಚ್.ಉಮೇಶ, ಪ್ರಕಾಶ ಕಲೂತಿ ಇತರರಿದ್ದರು.
Published on

ಹೂವಿನಹಡಗಲಿ: ಮೈಲಾರದ ಪಿಡಿಒ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗ್ರಾಪಂ ಸಿಬ್ಬಂದಿ ಸೋಮವಾರ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬಹು ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ಪಿಡಿಒ ನಾಗಪ್ಪ ಸರಿಯಾಗಿ ವೇತನ ನೀಡುತ್ತಿಲ್ಲ. ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬರಲ್ಲ. ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಯಾವ ಸಿಬ್ಬಂದಿ ಕರೆಗಳನ್ನೂ ಸ್ವೀಕರಿಸಲ್ಲ. ಅಧಿಕಾರಿ ಇಲ್ಲದ ಸಮಯದಲ್ಲಿ ಸಾರ್ವಜನಿಕರ ಕುಂದುಕೊರೆತೆ ಆಲಿಸಿದರೆ ನನ್ನ ಅನುಮತಿ ಇಲ್ಲದೆ ಹೇಗೆ ಅವಹಾಲು ಸ್ವೀಕರಿಸಿದಿರಿ ಎಂದು ರೇಗಾಡುತ್ತಾರೆ. ಕೂಡಲೇ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಬ್ಬಂದಿ ಶೇಖಪ್ಪ ಉದ್ಗಟ್ಟಿ, ಉಚ್ಚಂಗೆಪ್ಪ, ರಾಮಪ್ಪ ಬಾರ್ಕಿ, ಮಂಜುನಾಯ್ಕ ಲಂಬಾಣಿ, ಎಚ್.ಉಮೇಶ, ಪ್ರಕಾಶ ಕಲೂತಿ, ನಿಂಗಪ್ಪ ರಾಮಜ್ಜಿ, ಮಾಲತೇಶ ಬಾರ್ಕಿ, ಪ್ರಭು ರಾಮಜ್ಜಿ, ನಿಂಗಪ್ಪ ಮಾಳಗಿ, ಮಲ್ಲಿಕಾರ್ಜುನ, ನೀಲಮ್ಮ ಈಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net