ಮೈಲಾಪುರ ಗ್ರಾಪಂ ಪಿಡಿಒ ಅಮಾನತು

Published on

ಕಾರಟಗಿ: ಕೆಕೆಆರ್‌ಡಿಬಿಯಡಿ ನಿರ್ಮಾಣ ಮಾಡಲಾದ ಕಾಮಗಾರಿಗೆ ಎನ್‌ಒಸಿ ನೀಡಲು ಹಣಕ್ಕೆ ಬೇಡಿಕೆಯಿಟ್ಟ ತಾಲೂಕಿನ ಮೈಲಾಪುರ ಗ್ರಾಪಂ ಪಿಡಿಒ ಸೈಯದ್ ಜಿಲಾನ್ ಬಾಷಾ ಅವರನ್ನು ಅಮಾನತು ಮಾಡಿ ಜಿಪಂ ಸಿಇಒ ವರ್ಣಿತ್ ನೇಗಿ ಶುಕ್ರವಾರ ಆದೇಶಿಸಿದ್ದಾರೆ.

ಮೈಲಾಪುರದಲ್ಲಿ ಕ.ಕ. ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಅನುಷ್ಠಾನ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೆ ಎನ್‌ಒಸಿ ನೀಡುವಂತೆ ಸ್ಥಳೀಯರು ಪಿಡಿಒ ಸೈಯದ್ ಬಾಷಾಗೆ ಕೇಳಿದ್ದರು. ಈ ವೇಳೆ ಪಿಡಿಒ ಜಿಪಂಗೆ, ತಾಪಂಗೆ ಕೋಡಬೇಕು.

ಇವರಗಳಿಗೆಲ್ಲ ಏನು ಕೊಡಲಿ? ಎಂದಿದ್ದರು. ಬಳಿಕ ಸ್ಥಳೀಯರು ಅವರ ನಂಬರ್ ಕೊಡಿ ಮಾತನಾಡುತ್ತೇವೆ ಎನ್ನುತ್ತಾರೆ. ಇದಕ್ಕೆ ಪಿಡಿಒ ಒಪ್ಪುವುದಿಲ್ಲ. ನಂತರ ಸ್ಥಳೀಯರು ಇಲ್ಲಿಯವರೆಗೆ ಎಲ್ಲ ಅಧಿಕಾರಿಗಳು ಶೇ.42 ಮುರಿದುಕೊಂಡಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಂತರ ತಾಪಂ ಇಒ ಲಕ್ಷ್ಮೀದೇವಿ ಪಿಡಿಒ ಸಯದ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಿದ್ದರು. ಪಿಡಿಒ ಕಡೆಯಿಂದ ಯಾವುದೇ ಉತ್ತರ ಬಾರದ ಹಿನ್ನಲೆಯಲ್ಲಿ ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಜಿಪಂಗೆ ಪತ್ರ ಬರೆದಿದ್ದರು. ಹೀಗಾಗಿ ಸಿಇಒ ವರ್ಣಿತ್ ನೇಗಿ ಪಿಡಿಒ ಅವರನ್ನು ಜು.4ರಂದು ಅಮಾನತು ಮಾಡಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net