ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನ ಆಗಲಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

IMG-20220801-WA0017
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ಸುಧಾರಣಾ ಕ್ರಮಗಳು ಕುರಿತಾದ ಕಾರ್ಯಾಗಾರವನ್ನು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಡಾ.ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸಾಸನೂರ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಽಕಾರಿ ಡಾ.ವಿಜಯಮಹಾಂತೇಶ ದಾನಮ್ಮನವವರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಇತರರಿದ್ದರು.
Published on

ವಿಜಯಪುರ: ಇಂದಿನ ಚುನಾವಣೆ ವ್ಯವಸ್ಥೆಯಲ್ಲಿ ನನ್ನ ಮತ ಮಾರಾಟಕ್ಕಿಲ್ಲ ಎಂಬ ಅಭಿಯಾನವನ್ನು ಯುವಜನತೆ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ಸುಧಾರಣಾ ಕ್ರಮಗಳು ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಣಬಲ, ತೋಳ್ಬಲ, ಜಾತಿಬಲದಿಂದ ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಿ ಈ ವ್ಯವಸ್ಥೆಯ ಸುಧಾರಣೆಗೆ ಯುವನಜರು ಮುಂದಾಗಬೇಕಿದೆ. ಅದಕ್ಕಾಗಿ ದೃಢ ಸಂಕಲ್ಪವನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ಚುನಾವಣೆ ವ್ಯವಸ್ಥೆ, ಆಡಳಿತ ವ್ಯವಸ್ಥೆ ಹಾಳಾಗಿದ್ದರೂ ಹಿರಿಯರು ಮೌನ ವಹಿಸಿದ್ದಾರೆ. ಈ ಮೌನಕ್ಕೆ ನಾವು ಇಂದು ಬೆಲೆ ತೆರಬೇಕಾಗಿದೆ, ಹಲವಾರು ಜನ ಹಿರಿಯ ಸಾಹಿತಿಗಳಿದ್ದಾರೆ, ನಿವೃತ್ತ ನ್ಯಾಯಾಽÃಶರಿದ್ದಾರೆ, ಚಿಂತಕರಿದ್ದಾರೆ, ಅವರೆಲ್ಲರೂ ತಮ್ಮ ವೈಯುಕ್ತಿಕ ಬದುಕಿನಲ್ಲಿ ಯಶಸ್ಸು ಗಳಿಸಿ ಮೌನವಾಗಿದ್ದಾರೆ ಎಂದು ವಿಶ್ಲೇಷಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗ ಹಾಗೂ ಸಾರ್ವನಿಕರೆಲ್ಲರೂ ವ್ಯವಸ್ಥೆಗೆ ಸರಿದಾರಿಗೆ ತರಲು ಶ್ರಮಿಸಬೇಕು, ಎಐಎಸ್, ಐಎಫ್‌ಎಸ್ ಮೊದಲಾದ ಉನ್ನತೋನ್ನತ ಪದವಿಗೆ ಭಾಜನವಾಗಿ ಕಾರ್ಯಾಂಗದ ಹುದ್ದೆ ಅಲಂಕರಿಸಿದ್ದಾರೆ, ಆದರೆ ಈ ಓದಿನ ಪರಿಣಾಮದಿಂದ ಆಡಳಿತದಲ್ಲಿ ಸರಳತೆ, ಭಾವನೆಗಳಿಗೆ ಸ್ಪಂದಿಸುವ ವೇಗ ಇನ್ನೂ ಬಂದಿಲ್ಲ. ಜನಪರ ಕಾರ್ಯನಿರ್ವಹಿಸುವ ಜವಾಬ್ದಾರಿ ಶಾಸಕಾಂಗಕ್ಕೆ ಸೀಮಿತ ಇಲ್ಲ. ಅದು ಎಲ್ಲರ ಜವಾಬ್ದಾರಿ ಆಗಿದೆ ಎಂದರು.

ನ್ಯಾಯಾಂಗದಿAದ ನಿರ್ಣಯ ಸಿಗುತ್ತಿದೆ, ಆದರೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವೂ ಕಡಿಮೆಯಾಗುತ್ತಿದೆ. ಅನೇಕ ನ್ಯಾಯಾಽÃಶರ ಮೇಲೆ ಭ್ರಷ್ಟಾಚಾರ ಆಪಾದನೆಗಳಿವೆ. ಇದೊಂದು ಸಮಾಜಕ್ಕೆ ಮಾರಕವಾಗಲಿದೆ ಎಂದು ವಿಷಾದಿಸಿದರು.

ಇಂದಿನ ದಿನಗಳಲ್ಲಿ ಮೌಲ್ಯಗಳು, ಆದರ್ಶಗಳು ಕುಸಿಯುತ್ತಿವೆ. ಅವುಗಳನ್ನು ಹುಡುಕುವ ಸ್ಥಿತಿ ಬಂದೊದಗಿದೆ. ಜಾತಿ, ಹಣ, ಕುಟುಂಬ ರಾಜಕಾರಣದ ವಿಷವರ್ತುಲದಿಂದ ಹೊರಬಂದು ಪಾರದರ್ಶಕ, ಪ್ರಾಮಾಣಿಕವಾಗಿ ಚುನಾವಣೆಗಳು ಆಗಬೇಕಿದೆ. ಆಗ ಮಾತ್ರ ದೇಶ ಸದೃಢವಾಗಲು ಸಾಧ್ಯ. ಇಲ್ಲದಿದ್ದರೆ ಶ್ರೀಲಂಕಾದಲ್ಲಿ ನಡೆದ ರಾಜಕೀಯ ಬೆಳವಣಿಗೆ ರೀತಿಯಲ್ಲಿ ನಾವೂ ಎದುರಿಸಬೇಕಾದಿತು ಎಂದು ತಿಳಿಸಿದರು.

ಇದೇ ವೇಳೆ ಸಂವಾದ ಕಾರ್ಯಕ್ರಮ ನಡೆಯಿತು. ಒಂದು ರಾಷ್ಟç ಒಂದು ಚುನಾವಣೆ, ನೋಟಾ ಕುರಿತು ಚರ್ಚೆ, ಚುನಾವಣೆಯಲ್ಲಿ ಮಕ್ಕಳ ಬಳಕೆ, ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಕಡ್ಡಾಯಗೊಳಿಸುವುದು, ಪಕ್ಷಾಂತರ ನಿಷೇಧ ಕಾಯ್ದೆ ಕಠಿಣಗೊಳಿಸುವುದು. ಕುಟುಂಬ ರಾಜಕಾರಣದಿಂದಾಗುವ ದುಷ್ಪರಿಣಾಮ ಹೀಗೆ ಅನೇಕ ವಿಷಯಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಡಾ.ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸಾಸನೂರ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಽಕಾರಿ ಡಾ.ವಿಜಯಮಹಾಂತೇಶ ದಾನಮ್ಮನವವರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಎಚ್.ಡಿ. ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಎಡಿಸಿ ರಮೇಶ ಕಳಸದ, ಉಪ ವಿಭಾಗಾಽಕಾರಿ ಬಲರಾಮ ಲಮಾಣಿ, ಎಎಸ್‌ಪಿ ಡಾ.ರಾಮ ಅರಸಿದ್ದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net