

ಉತ್ತರಪ್ರದೇಶದ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2024-25ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಹಾಗೂ ಮಹಿಳೆಯರ ಕಿಕ್‌ಬಾಕ್ಸಿಂಗ್ ಸ್ಪರ್ಧೆಗೆ ಮೈಸೂರು ವಿವಿ ತಂಡ ಭಾಗಿಯಾಗಿದೆ.
ಈ ಸಂಬಂಧ ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಮಾರ್ಚ್ 21ರಿಂದ 25ರವರೆಗೆ ಸ್ಪರ್ಧೆ ನಡೆಯಲಿದೆ. ಮಹಿಳಾ ತಂಡದಲ್ಲಿ ಎಚ್.ಸಿ.ಸ್ಫೂರ್ತಿ (ನಾಯಕಿ), ಎ.ಪಿ.ಪಲ್ಲವಿ, ಎನ್.ಎಲ್.ದುರ್ಗಾ ಭವಾನಿ, ಎಸ್.ಶಾಲಿನಿ, ಎಚ್.ಎನ್.ಪುಷ್ಪಲತಾ, ಬಿಂದುಶ್ರೀ, ರೋಶನಿ ಮುತ್ತಣ್ಣ, ಬಿ.ಸ್ಫೂರ್ತಿ ಮಲ್ಲಿಕ್, ಸಹಾನ ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಜೆ.ಶಶಾಂಕ್(ನಾಯಕ), ಜೆ.ನಮಿತ್, ಎಂ.ಎಸ್.ಪ್ರೀತಂ, ಟಿ.ಸುದೀಪ್, ಡಿ.ಎನ್.ಕೌಶಿಕ್, ಡಿ.ವಿನಿತ್ ರಾಜ್, ಡಿ.ಪಿ.ಭುವನ್, ಎಂ.ಸಿ.ಉಲ್ಲಾಸ ಗೌಡ, ಎಂ.ವಿಧು ವಿರೇಂದ್ರ, ಬಿ.ಆರ್.ತೇಜಸ್, ವಿಜಯ್ ಸೂರ್ಯ, ಅಂಬರೀಶ್, ಮನೋಹರ ನಾಯಕ್ ಆಯ್ಕೆಯಾಗಿದ್ದು, ತರಬೇತುದಾರ ಎಸ್.ಜೆ.ಜಶ್ವಂತ್, ವ್ಯವಸ್ಥಾಪಕ ಆರ್.ರಮೇಶ್ ನೇತೃತ್ವದಲ್ಲಿ ನಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.