ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಅಮೃತ ಕಳಸ ಯಾತ್ರೆ

25 Dwd 1
Published on

ಧಾರವಾಡ: ಕೇಂದ್ರ ಸರ್ಕಾರ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾಡಳಿತ, ಸರ್ಕಾರಿ ಪ್ರಥಮ ಧರ್ಜೆ ಕಾಲೇಜು, ಎನ್‌ಎಸ್‌ಎಸ್, ಎನ್‌ಸಿಸಿ, ಬ್ಯಾಂಕ್ ಆಫ್ ಬರೋಡಾ, ಲೀಡ್ ಬ್ಯಾಂಕ್ ಸಹಯೋಗದಲ್ಲಿ `ನನ್ನ ಮಣ್ಣು ನನ್ನ ದೇಶ' ಅಭಿಯಾನದಡಿ ನಗರದಲ್ಲಿ ಇತ್ತೀಚೆಗೆ ಅಮೃತ ಕಳಸ ಯಾತ್ರೆ ನಡೆಯಿತು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್ ದೊಡ್ಡಪ್ಪ ಹೂಗಾರ ಮತ್ತು ತಾ.ಪಂ. ಇಒ ಗಂಗಾಧರ ಕಂದಕೂರ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಜಗ್ಗಲಗಿ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಜ್ಯುಬಿಲಿ ವೃತ್ತದ ಮೂಲಕ ಗ್ರಾಮೀಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯವರೆಗೆ ಸಾಗಿತು.
ತಾ.ಪಂ. ಇಒ ಗಂಗಾಧರ ಕಂದಕೂರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ನಳಿನಿ ಬೆಂಗೇರಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಗಲ, ಗಿರೀಶ ಕೋರಿ, ಪ್ರೊ. ಶಿವಾನಂದ ನರಹಟ್ಟಿ, ಶಿವಾಜಿ ಎನ್.ಕೆ., ಸಂಜಯ ಬಿರಾದಾರ, ಸ್ಕೌಟ್ ಗೈಡ್ಸ್, ಆಶಾ- ಅಂಗನವಾಡಿ ಕಾರ್ಯಕರ್ತರು, ಇತರರಿದ್ದರು.
ತಾಲೂಕಿನ ವಿವಿಧೆಡೆ ಸಂಗ್ರಹಿಸಿದ ಮಣ್ಣಿನ ಕಳಸವನ್ನು ನೆಹರು ಯುವ ಕೇಂದ್ರ ಅಽಕಾರಿ ಎಂ. ಗೌತಮ ರೆಡ್ಡಿ ಅವರಿಗೆ ಹಸ್ತಾಂತರಿಸಲಾಯಿತು. ಎನ್‌ಎಸ್‌ಎಸ್ ಅಽಕಾರಿಗಳಾದ ಡಾ. ಬಸವರಾಜ ತಲ್ಲೂರ ಪ್ರತಿಜ್ಞಾವಿಽ ವಾಚಿಸಿದರು.
ಇದೆವೇಳೆ ಮಾಜಿ ಸೈನಿಕರಾದ ಈರಣ್ಣ ಕುಂಬಾರ, ಸುರೇಶ ಪತ್ತಾರ, ಶಿವಾಜಿ ಅರೇರ, ಭೀಮಸಿ ಜಾಧವ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net