ನನ್ನ ಪತಿ ಕೆತ್ತನೆಯ ಮೂರ್ತಿ ಅಂತಿಮಗೊಳುತ್ತದೆ ಎಂಬ ನಂಬಿಕೆ ಇತ್ತು

WhatsApp Image 2024-01-01 at 4.46.18 PM
Published on

ಮೈಸೂರು: ನನ್ನ ಪತಿ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮ (ರಾಮಲಲ್ಲಾ) ವಿಗ್ರಹವನ್ನು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ವಿಜೇತಾ ಹೇಳಿದರು.

ಅವರ ವಿಗ್ರಹವನ್ನೇ ಟ್ರಸ್ಟ್ ಅಂತಿಮಗೊಳಿಸುತ್ತಾರೆ ಎಂಬ ನಂಬಿಕೆ ಇತ್ತು. ಅದು ಹಾಗೇ ಆಗಿರುವುದಕ್ಕೆ ಖುಷಿಯಾಗಿದೆ. ಅವರು ಆರು ತಿಂಗಳು ತುಂಬಾ ಕಷ್ಟಪಟ್ಟು ವಿಗ್ರಹ ಕೆತ್ತಿದ್ದಾರೆ. ಅದಕ್ಕಾಗಿ ಅಪಾರ ಅಧ್ಯಯನ ಮಾಡಿದ್ದರು.

ಆರು ತಿಂಗಳು ಕುಟುಂಬವನ್ನು ಬಿಟ್ಟು ಅಯೋಧ್ಯೆಯಲ್ಲಿ ನೆಲೆಸಿದ್ದರು. ಆ ವೇಳೆ ನನ್ನ ಮಗ, ಮಗಳು ಇಬ್ಬರು ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ ಆಗಿರುವ ಖುಷಿಯಲ್ಲಿ ಹಿಂದಿನ ಎಲ್ಲ ಸಂಗತಿಗಳು ಮರೆತುಹೋಗಿವೆ. ಯೋಧರು ತಮ್ಮ ಕುಟುಂಬ ಬಿಟ್ಟು ಹೋಗಿ ದೇಶ ಸೇವೆ ಮಾಡುವ ರೀತಿಯೇ ನನ್ನ ಪತಿಯೂ ಸೇವೆ ಮಾಡಿದ್ದಾರೆ ಎಂದು ಭಾಸವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net