ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆಗೆ ನನ್ನ ಒತ್ತಾಯ- ಕುಮಾರ ಬಂಗಾರಪ್ಪ

Kumar Bangarappa
Kumar Bangarappa
Published on

ರಾಯಚೂರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಅವಶ್ಯವಾಗಿದ್ದು, ನಾವು ಈಗಲೂ ಒತ್ತಾಯ ಮಾಡುತ್ತೇವೆ. ಹೈಕಮಾಂಡ್ ಯಾರನ್ನಾದರು ಹೊಸ ಅಧ್ಯಕ್ಷವೆಂದು ಹೇಳಿದರು ನಾವು ಒಪ್ಪುತ್ತೇವೆಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.

ನಗರದ ಮಾಜಿ ಸಂಸದ ಬಿ.ವಿ.ನಾಯಕ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಇರುವುದರಿಂದ ನಾವು ಬಲವಾಗಿ ಧ್ವನಿ ಎತ್ತುತೇವೆ. ಈ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಲ್ಲಿದ್ದಾಗ ಜತೆಯಲ್ಲಿ ಸೇರಿ ಹೋರಾಟ ಮಾಡಿದ್ದೇವು. ಇವಾಗ ಅವರು ಪಕ್ಷದಲ್ಲಿ ಇಲ್ಲದಿರುವುದರಿಂದ ನಮ್ಮ ಹೋರಾಟಕ್ಕೆ ಅವರಿಗೆ ಸಂಬಂಧವಿಲ್ಲ. ಮುಂದೆ ನೂರಕ್ಕೆ ನೂರಷ್ಟು ಯತ್ನಾಳ್ ವಾಪಸ್ ಬರುತ್ತಾರೆಂದು ವಿಶ್ವಾಸ ನನಗಿದೆ. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯಿದೆಯನ್ನು ಜಾರಿ ಮಾಡಿದ್ದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದಂತಾಗಿದ್ದು, ಇದರಿಂದ ಬಡವರಿಗೆ ಅನುಕೂಲವಾಗಿದೆ ಎಂದರು.

ರಾಜ್ಯದಲ್ಲಿ ಹೊರದೇಶಗಳ ನುಸುಳುಕೋರರು ದೊಡ್ಡಮಟ್ಟದಲ್ಲಿದ್ದಾರೆ. ಪಾಕಿಸ್ತಾನದವರು ಅಲ್ಲಿಯೇ ಇದ್ದುಕೊಂಡು ಉಗ್ರರಿಗೆ ಬೆಂಬಲ ನೀಡುತ್ತಿರುವುದರಿಂದ ನಮ್ಮ ದೇಶ ತಕ್ಕ ಉತ್ತರ ನೀಡಿದೆ. ಯುದ್ಧ ಅರ್ಧಕ್ಕೆ ನಿಲ್ಲಿಸಿದೆ ಎಂದು ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಆಪರೇಷನ್ ಸಿಂಧೂರ ಇನ್ನೂ ಮುಕ್ತಾಯವಾಗಿಲ್ಲ ಜಾರಿಯಲ್ಲಿದೆ. ಪಾಕಿಸ್ತಾನಕ್ಕೆ ಪರೋಕ್ಷವಾಗಿ, ನೇರವಾಗಿ ಬೆಂಬಲಿಸುವ ದೇಶಗಳಿಗೆ ನಾವು ತಕ್ಕ ಉತ್ತರ ನೀಡಿದ್ದೇವೆ ಎಂದರು.

ಬಾಂಗ್ಲಾ ದೇಶದ ನುಸುಳುಕೋರರು ದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ನಮ್ಮ ರೈತರ,ಬಡವರ ಕೆಲಸಗಳನ್ನು ಕಸಿದುಕೊಂಡಿದ್ದಾರೆ. ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದ ಜನರು ನಮಗೆ ಗುಪ್ತವಾಗಿ 36 ಸಾವಿರ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ್ದಾರೆ. ನುಸುಳುಕೋರರು ದೇಶದಲ್ಲಿ ಡ್ರಗ್ಸ್ ಪೆಡ್ಲರ್, ಕ್ರಿಮಿನಲ್ ಚಟುವಟಿಕೆಗಳು, ಅಪಾರ್ಟ್‌ಮೆಂಟ್ , ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ರಾಜ್ಯದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ಗಳಲ್ಲಿಯೇ ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮ್ಮ ರೈತರಿಗೆ ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ ಎಂದರು.

ಕೇವಲ ಬೆಂಗಳೂರಿನಲ್ಲಿಯೇ ಬಾಂಗ್ಲಾ ನುಸುಳುಕೋರರೇ ನಾಲ್ಕೈದು ಕಾರ್ಪೊರೇಟ್ ಸ್ಥಾನ ಗೆಲ್ಲುವ ಪರಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇವರನ್ನು ಪತ್ತೆ ಹಚ್ಚಿ, ತಡೆಯುವಂತಾ ಕೆಲಸಗಳು ಆಗಬೇಕಿದೆ. ನಕಲಿ ದಾಖಲೆ ಸೃಷ್ಟಿಸಲು ಸಾವಿರಾರು ಜನ ನಕಲಿ ಏಜೆಂಟ್‌ಗಳು ಇದ್ದಾರೆ, ಈ ಕುರಿತು ಕಳೆದ ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬೆಳಕಿಗೆ ಬಂದಿತ್ತು, ಆದರೆ ಪ್ರಕ್ರಿಯೇ ಮುಂದುವರೆದಿರಲಿಲ್ಲ. ಅಕ್ರಮ ನುಸುಳುಕೋರರಿಗೆ ಮೂರು ವರ್ಷದ ಶಿಕ್ಷೆಯನ್ನು 10 ವರ್ಷ ಮಾಡಬೇಕು ಎಂದು ಒತ್ತಾಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net