ನನ್ನ ಕಂಪನಿ ನನ್ನ ಉತ್ಪನ್ನಕ್ಕೆ ಉತ್ತಮ ಸ್ಪಂದನೆ

IMG-20250208-WA0024.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀನಗರದ ಚೇತನ ಬಿಜಿನೆಸ್ ಸ್ಕೂಲ್ ನಲ್ಲಿ ಶನಿವಾರ ಏರ್ಪಡಿಸಿದ್ದ ಸಮ್ಮರ ಇನ್ ಪ್ಲಾಂಟ್ ನ "ಮೈ ಕಂಪನಿ ಮೈ ಪ್ರಾಡಕ್ಟ್' ಎಂಬ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಅಹ್ಮದಾಬಾದ್ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ನಿವೃತ್ತ ಪ್ರಾಧ್ಯಾಪಕ ಮುಕುಂದ ದೀಕ್ಷಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಯುವಿಕೆ ನಿರಂತರವಾಗಿರುತ್ತದೆ. ವಿದ್ಯಾರ್ಥಿಗಳು ತಾವು ಇಂರ್ಟನಶಿಪ್ ನಿರ್ವಹಿಸಿದ ಕಂಪನಿಯ ಬಗ್ಗೆ ಹಾಗೂ ಗಳಿಸಿದ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನ ಪಡೆಯಬಹುದು ಎಂದರು. ಚೇತನ್ ಬಿಜಿನೆಸ್ ಸ್ಕೂಲ್ ನವರು ವಿದ್ಯಾರ್ಥಿಗಳನ್ನು ಉತ್ತಮವಾಗಿ ಬೆಳೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ತೀರ್ಪುಗಾರರಾಗಿ ಆಗಮಿಸಿದ್ದ ಲಘು ಉದ್ಯೋಗ ಭಾರತಿಯ ಎಸ್.ಸಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ವ ಉದ್ಯೋಗ ಪ್ರಾರಂಭಿಸಲು ಸಲಹೆ ನೀಡಿದರು.

ಸಂಯೋಜಕಿ ಡಾ. ಮಂಗಳಾ ಯರಗಟ್ಟಿ ಸಮ್ಮರ್ ಇಂರ್ಟನಶಿಪ್ ಪ್ರಾಜೆಕ್ಟ್ ವರದಿಯ ಬಗ್ಗೆ ವಿವರಿಸಿದರು.

50 ಕಂಪನಿಗಳು ಕಾರ್ಯಕ್ರಮಕ್ಕಾಗಿ ಸಂಪರ್ಕಿಸಿದ್ದವು. ಇದರಲ್ಲಿ 35 ಕಂಪನಿಗಳು ತರಬೇತಿ ನೀಡಲು ಸಮ್ಮತಿಸಿವೆ. ತರಬೇತಿ ಸಮಯದಲ್ಲಿ ಸಂಭಾವನೆ ಹಾಗೂ ಪ್ರೋತ್ಸಾಹ ಧನ ನೀಡಲಾಗಿದೆ. ಶೇ. 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಕೆಲಸದ ಪ್ರಯುಕ್ತ ಪ್ರಶಂಸಾ ಪ್ರಮಾಣಪತ್ರ ಪಡೆದರು. 35ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳ ಸ್ಟಾಲ್ ಗಳನ್ನು ತೆರೆದಿದ್ದವು.

ಡಾ. ವಿ.ಎಂ. ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಶ್ವೇತ ಸಜ್ಜನರ, ಡಾ. ರಮಾಕಾಂತ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಅನಿಲ ಯರಗಟ್ಟಿ ಸ್ವಾಗತಿಸಿದರು. ಡಾ. ಎಂ.ಎನ್. ಮಾಣಿಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net