ಧಾರವಾಡಕ್ಕೆ ಬರಲಿದೆ ಮುತ್ತಯ್ಯ ಇಂಡಸ್ಟ್ರಿ

IMG-20230809-WA0025-1.jpg
Published on

ಹುಬ್ಬಳ್ಳಿ: ಸ್ಪಿನ್ ಮಾಂತ್ರಿಕ, ಶ್ರೀಲಂಕಾದ ಮಾಜಿ ಕ್ರಿಕೇಟರ್ ಮುತ್ತಯ್ಯ ಮುರಳೀಧರನ್ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಅವರ ಒಂದು ಉತ್ಪಾದನೆ ಘಟಕ ಧಾರವಾಡಕ್ಕೂ ಬರುತ್ತಿದೆ.

ರಾಜ್ಯ ಸರ್ಕಾರವು ಧಾರವಾಡ ಬಳಿಯ ಮುಮ್ಮಿಗಟ್ಟಿಯಲ್ಲಿ ತ್ವರಿತವಾಗಿ ಬಳಕೆಯಾಗುವ ಗ್ರಾಹಕರ ವಸ್ತುಗಳ (ಎಫ್ಎಂಸಿಜಿ) ಕ್ಲಸ್ಟರ್ ಸ್ಥಾಪನೆಗೆ ಮುಂದಡಿ ಇಟ್ಟಿದೆ. ಇದೇ ಕ್ಲಸ್ಟರ್ನಲ್ಲಿ ಮುತ್ತಯ್ಯ ಅವರು ತಮ್ಮ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.

ಶ್ರೀಲಂಕಾದಲ್ಲಿ ತಂಪು ಪಾನೀಯ ಉತ್ಪಾದನೆ ಟಕ ಹೊಂದಿರುವ ಮುರಳೀಧರನ್ ಅವರು ಧಾರವಾಡದಲ್ಲಿ ಅದರ ಶಾಖೆ ಸ್ಥಾಪನೆಗೆ ಉತ್ಸುಕತೆ ತೋರಿದ್ದಾರೆ. ಇದಕ್ಕಾಗಿ ಜಾಗ ನೋಡಲು ಕಳೆದ ಭಾನುವಾರ ಅವರು ಧಾರವಾಡಕ್ಕೆ ಆಗಮಿಸಿದ್ದರು.

ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಸುಮಾರು 13.5 ಎಕರೆಯನ್ನು ತೋರಿಸಲಾಗಿದೆ. ಇದು ಮೊದಲ ಹಂತದ ಉತ್ಪಾದನೆ ಆರಂಭಕ್ಕೆ ಅನುಕೂಲವಾಗಲಿದೆ. ಇನ್ನಷ್ಟು ಜಾಗಕ್ಕೆ ಅವರು ಬೇಡಿಕೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ಪಾಟೀಲ ತಿಳಿಸಿದರು.

2020ರಲ್ಲಿ ಸ್ಥಾಪನೆಯಾದ ಮುತ್ತಯ್ಯ ಅವರ ಮಾಲೀಕತ್ವದ ಸಿಲೋನ್ ಬೆವರೇಜಿಸ್ ಕ್ಯಾನ್ ಲಿಮಿಟೆಡ್ ಕಂಪನಿಯು ದೊಡ್ಡ ಮೊತ್ತದ ಹೂಡಿಕೆ ಮಾಡಲು ಉದ್ದೇಶಿಸಿದೆ. ಸದ್ಯಕ್ಕೆ ಮೊದಲ ಹಂತದ ಕೆಲಸ ಆರಂಭಿಸಿದ್ದಾರೆ.

ಈ ಮೂಲಕ ನೂರಾರು ಉದ್ಯೋಗ ನೀಡುವ ಗುರಿ ಹೊಂದಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net