

ಕುಶಾಲನಗರ:
ಇಲ್ಲಿನ ಬೈಚನಳ್ಳಿ ಯೋಗಾನಂದ ಬಡಾವಣೆಯಲ್ಲಿ ಇರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಮತ್ತು ದೇವಾಲಯ ಸಮಿತಿ ಆಶ್ರಯದಲ್ಲಿ ಫೆ. 15 ಹಾಗೂ 16 ರಂದು ನಡೆದಿದ್ದ ತೆರೆ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಯ ಲೆಕ್ಕಪತ್ರ ಮಂಡನೆ ಭಾನುವಾರ ನಡೆಯಿತು. ಮುತ್ತಪ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವರದ ಲೆಕ್ಕಪತ್ರ ಮಂಡಿಸಿದರು. ಎಲ್ಲಾ ಖರ್ಚು ಕಳೆದ ಖಾತೆಯಲ್ಲಿ 2,47,740 ರೂ. ಉಳಿದಿರುವುದಾಗಿ ವರದ ಮಾಹಿತಿ ನೀಡಿದರು.
ಈ ಬಾರಿ ಅತಿ ಯಶಸ್ವಿಯಾಗಿ ಮುತ್ತಪ್ಪ ತೆರೆ ಮಹೋತ್ಸವ ನಡೆಸಿದ್ದಕ್ಕಾಗಿ ಉತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ದೇವಾಲಯ ಸಮಿತಿಯ ಆಡಳಿತ ಮಂಡಳಿ ಹಾಗೂ ಸದಸ್ಯರು ಇದೇ ವೇಳೆ ಅಭಿನಂದನೆಗಳನ್ನು ಸಲ್ಲಿಸಿದರು. ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಉಪಾಧ್ಯಕ್ಷ ಹರೀಂದ್ರನ್, ಕಾರ್ಯದರ್ಶಿ ರಂಜಿತ್ ಕುಮಾರ್, ಕೆ.ಎಂ. ಹರೀಂದ್ರನ್, ನಿರ್ದೇಶಕರಾದ ಸಂದೇಶ್, ವಿನು ಕಮಲ್ ಹಾಗೂ ದೇವಾಲಯ ಸಮಿತಿಯ ಪ್ರಮುಖರು ಮತ್ತು ಸದಸ್ಯರು ಇದ್ದರು.