ಕುಶಾಲನಗರದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ

muttappa
Published on

ಕುಶಾಲನಗರ:

ಕುಶಾಲನಗರದ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿ ಇರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಫೆ. 15 ನೇ ಶನಿವಾರ ಮತ್ತು ಫೆ. 16 ನೇ ಭಾನುವಾರ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದೆ ಎಂದು ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವರದ ತಿಳಿಸಿದ್ದಾರೆ.

ಫೆ.15 ರಂದು ಶನಿವಾರ ಬೆಳಗ್ಗೆ 5.30 ಕ್ಕೆ ಗಣಪತಿ ಹೋಮ, 10.30ಕ್ಕೆ ಧ್ವಜಾರೋಹಣ, ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್, ಸಂಜೆ 4 ಗಂಟೆಗೆ ಕೇರಳದ ಪ್ರಖ್ಯಾತ ಚಂಡೆವಾದಕರ ವಾದ್ಯ ಘೋಷದೊಂದಿಗೆ ನೂರಾರು ಮಹಿಳೆಯರು ಜ್ಯೋತಿ ಬೆಳಗಿಸಿಕೊಂಡು ಅಯ್ಯಪ್ಪ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ತಾಲಿಪೋಲಿ ಮೆರವಣಿಗೆ ನಡೆಯಲಿದೆ.

ಭಾನುವಾರ ರಾತ್ರಿ 7.30 ಅನ್ನದಾನ, 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11 ಗಂಟೆಗೆ ಕಳಿಗ ಪಾಟು, 12 ಗಂಟೆಗೆ ಕಳಸ ಆಗಮನ, ಬೆಳಗ್ಗೆ 5 ಗಂಟೆಗೆ ತಿರುವಪ್ಪನ ವೆಳ್ಳಾಟಂ, ಮಧ್ಯಾಹ್ನ 12.30 ಅನ್ನದಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net