ಸಂಗೀತ ಸಾಧನೆಯಿಂದ ಸಂಸ್ಕಾರಯುತ ಜೀವನ

udp-21-ragadhana
Published on

ಉಡುಪಿ: ಸಂಗೀತವನ್ನು ಹರಿಯುವ ನದಿಗೆ ಹೋಲಿಸಬಹುದು. ನದಿಗೆ ನಮ್ಮ ಅವಶ್ಯಕತೆಯಿಲ್ಲ. ಆದರೆ ನಮ್ಮ ಬಾಹ್ಯ ಶುದ್ದಿಗೆ ನದಿಯು ಬೇಕು. ಅದೇ ರೀತಿ ಸಂಗೀತ ಸಾಧನೆಯಿಂದ ನಾವು ಸಂಸ್ಕಾರವಂತರಾಗಿ ಬಾಳಬಹುದು ಎಂದು ಗುರುಗುಹಾಮೃತ ಸಂಸ್ಥೆ ಸಂಸ್ಥಾಪಕ ವಿದ್ವಾನ್​ ಜಿ. ರವಿಕಿರಣ್​ ಚೆನೈ ಹೇಳಿದರು.

ಮಣಿಪಾಲ ಡಾಟ್​ ನೆಟ್​ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ರಾಗಧನ ವತಿಯಿಂದ ಹಮ್ಮಿಕೊಂಡ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೃತಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಭಾರತ ಸನಾತನ ಸಂಸ್ಕೃತಿಯ ದೇಶ. ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತಾಸಕ್ತಿಯನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರ ಹಿರಿದಾಗಿದೆ ಎಂದು ಹೇಳಿದರು. ಡಾ. ಶ್ರೀಕಿರಣ್​ ಹೆಬ್ಬಾರ್​ ಅಧ್ಯಕ್ಷತೆ ವಹಿಸಿದ್ದರು. ತನ್ಮಯಿ ಉಪ್ಪಂಗಳ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಕೃತಿಯನ್ನು ಹಾಡಿ, ಪ್ರಾರ್ಥನೆಗೈದರು. ರಾಗಧನ ಸಂಸ್ಥೆಯ ಕಾರ್ಯದರ್ಶಿ ವಿದುಷಿ ಉಮಾಶಂಕರಿ ಸ್ವಾಗತಿಸಿದರು. ಖಜಾಂಚಿ ಕೆ. ಸದಾಶಿವ ರಾವ್​ ವಂದಿಸಿದರು. ಕೆ. ಆರ್​. ರಾಘವೇಂದ್ರ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net