

ಮದ್ದೂರು: ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀ ಸೀತಾರಾಮ ಲಕ್ಷ್ಮಣ, ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಮುತ್ತುರಾಯಸ್ವಾಮಿ ಹರಿಸೇವೆ ಸಡಗರದಿಂದ ನೆರವೇರಿತು.
ಹರಿಸೇವೆ ಅಂಗವಾಗಿ ಶುಕ್ರವಾರ ರಾತ್ರಿ ತಲೆಮುಡಿ, ಬಾಯಿಬೀಗ, ದೇವರ ಉತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಶನಿವಾರ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ.ಎಂ.ಉದಯ್, ಸಮಾಜ ಸೇವಕ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು), ಆರ್.ಕೆ.ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಸೇರಿದಂತೆ ತೊಪ್ಪನಹಳ್ಳಿ, ರಾಜೇಗೌಡನದೊಡ್ಡಿ, ಕೆ.ಹೊನ್ನಲಗೆರೆ ಹಾಗೂ ಸುತ್ತಮುತ್ತಲಿನ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.