ಸೌಕರ್ಯಕ್ಕಾಗಿ ಮುತ್ತುರಾಯನಗರದ ನಿವಾಸಿಗಳ ಪಟ್ಟು

FotoJet
Published on

ರಸ್ತೆಯಲ್ಲೇ ಕುಳಿತು ಪ್ರತಿಭಟನೆ > ಸಮಸ್ಯೆ ಬಗೆಹರಿಸದಿದ್ದರೆ 11ಕ್ಕೆ ಮತ್ತೆ ಹೋರಾಟದ ಎಚ್ಚರಿಕೆ

 ತುರುವೇಕೆರೆ: ಮೂಲಸೌಕರ್ಯ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ಮುಂದೆ ಪಟ್ಟಣದ ಎಂಟನೇ ವಾರ್ಡ್​ನ ಮುತ್ತುರಾಯ ನಗರ ಬಡಾವಣೆಯ ನಾಗರಿಕರು ಶನಿವಾರ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಮುತ್ತುರಾಯನಗರದ ರಸ್ತೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಎಸ್​ಎಸ್​ ಮುಖಂಡ, ನಿವೃತ್ತ ಶಿಕ ಬೋರಪ್ಪ, ಪಟ್ಟಣ ಪಂಚಾಯಿತಿಯಿಂದ ಅನುಮತಿ ಪಡೆದು ಮನೆ ಕಟ್ಟಿಕೊಂಡು ಕಂದಾಯ ಪಾವತಿಸಿ ಜೀವಿಸುತ್ತಿದ್ದೇವೆ. ಮೂಲಸೌಕರ್ಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗೆ ಅರ್ಜಿ ಕೊಟ್ಟರೂ ಪರಿಹಾರ ಸಿಕ್ಕಿಲ್ಲ. ಚರಂಡಿಯೇ ಇಲ್ಲದಂತಾಗಿ ಕಲುಷಿತ ನೀರೆಲ್ಲ ಮನೆ ಒಳಗೆ ನುಗ್ಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಆ. 11 ರಂದು ಪಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂರ್ಷ ಸಮಿತಿ ಸಂಚಾಲಕ ಕುಮಾರ್​ ದಂಡಿನಶಿವರ ಮಾತನಾಡಿ, ಪ್ರತಿಭಟನೆಗೆ ಕದಸಂಸ ಬೆಂಬಲ ನೀಡಲಿದೆ ಎಂದರು. ಮುತ್ತುರಾಯನಗರ ನಿವಾಸಿ ನವಾಬ್​ ಮಾತನಾಡಿ, ಚರಂಡಿ ವ್ಯವಸ್ಥೆ ಮಾಡಿಸಬೇಕು, ಪರಿಹಾರ ಸಿಗದಿದ್ದರೆ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net