VIDEO: ಸಿನಿಮೀಯ ಮಾದರಿಯಲ್ಲಿ ಫೈನಾನ್ಸ್ ದರೋಡೆಗೆ ಯತ್ನ: ಸೈರನ್​ಗೆ ಹೆದರಿ ಓಡಿದ ದುಷ್ಕರ್ಮಿಗಳು!

Muttot Finance robbery VJP 2 MAR 20
Published on

ವಿಜಯಪುರ: ಪಕ್ಕಾ ಸಿನಿಮೀಯ ಶೈಲಿಯಲ್ಲಿ ಹಾಡುಹಗಲೇ ಫೈನಾನ್ಸ್ ಒಂದರ ದರೋಡೆಗೆ ಸ್ಕೆಚ್​ ಹಾಕಿದ್ದ ಗುಂಪೊಂದು ಸೋಮವಾರ ಅಲ್ಲಿದ್ದ ಸೈರನ್ ಮೊಳಗಿದ್ದರಿಂದ ಹೆದರಿ ಪರಾರಿಯಾಗಿದ್ದಾರೆ!

ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್‌ಗೆ ಬೆಳಗ್ಗೆ 9.30ಕ್ಕೆ ದರೋಡೆಕೋರರ ಗುಂಪೊಂದು ನುಗ್ಗಿದೆ. ಕೈಯಲ್ಲಿ ಬಂದೂಕು ಹಿಡಿದು ಕಾವಲುಗಾರನಿಗೆ ಬೆದರಿಕೆ ಹಾಕಿದ್ದಾರೆ. ಹಣವಿದ್ದ ಕೋಣೆಯ ಬಾಗಿಲು ತೆಗೆಯುವಂತೆ ಒತ್ತಡ ಹೇರಿದ್ದಾರೆ. ಕೂಡಲೇ ಸಮಯ ಪ್ರಜ್ಞ ಮೆರೆದ ಕಾವಲುಗಾರ ಅಪಾಯದ ಸೈರನ್ನಿನ ಗುಂಡಿ ಒತ್ತಿದ್ದಾನೆ. ಸೈರನ್ ಮೊಳಗುತ್ತಿದ್ದಂತೆ ಎಚ್ಚೆತ್ತ ದುಷ್ಕರ್ಮಿಗಳು ದರೋಡೆ ಮಾಡುವುದನ್ನು ಬಿಟ್ಟು ಕಾಲ್ಕಿತ್ತಿದ್ದಾರೆ.

ಕಾವಲುಗಾರ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ. ಒಟ್ಟು ಐವರು ದರೋಡೆಕೋರರು ಇದ್ದರು. ದರೋಡೆ ಪ್ರಯತ್ನ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ಹೋಗಿದ್ದು, ಸ್ಥಳಕ್ಕೆ ಎಸ್‌ಪಿ ಅನುಪಮ ಅಗರವಾಲ ಹಾಗೂ ಗಾಂಧಿ ಚೌಕ್ ಠಾಣೆ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net