ಮುತ್ತಪ್ಪ ಮಲೆಯಾಳಿ ಸಮಾಜದಿಂದ ಫ್ರೀಜರ್ ಉದ್ಘಾಟನೆ

ಫ್ರೀಸರ್ ಲೋಕಾರ್ಪಣೆ ಕಾರ್ಯದಲ್ಲಿ ಪದ್ಮನಾಭ,  ಸಿ.ಆರ್.ಸಜೀವನ್, ಮುರುಳಿ ಪಿ.ಡಿ.ಸುರೇಶ್, ವಿ.ಬಿ.ಪ್ರಸಾದ್, ಎ.ಎ.ರಾಜನ್, ಕೆ.ಚಂದ್ರಪ್ರಕಾಶ್ ಇದ್ದರು.
ಫ್ರೀಸರ್ ಲೋಕಾರ್ಪಣೆ ಕಾರ್ಯದಲ್ಲಿ ಪದ್ಮನಾಭ, ಸಿ.ಆರ್.ಸಜೀವನ್, ಮುರುಳಿ ಪಿ.ಡಿ.ಸುರೇಶ್, ವಿ.ಬಿ.ಪ್ರಸಾದ್, ಎ.ಎ.ರಾಜನ್, ಕೆ.ಚಂದ್ರಪ್ರಕಾಶ್ ಇದ್ದರು.
Published on

ವಿರಾಜಪೇಟೆ: ನಗರದ ಮಲಬಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯ ಆವರಣದಲ್ಲಿ ಶ್ರೀ ಮುತ್ತಪ್ಪ ಮಲೆಯಾಳಿ ಸಮಾಜ ವತಿಯಿಂದ ಭಾನುವಾರ ಫ್ರೀಜರ್ ಉದ್ಘಾಟನೆ ಮಾಡಲಾಯಿತು.

ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ಮಾತನಾಡಿ, ಸಂಘವು ಸಮಾಜದವರಿಗೆ ಮರಣ ನಿಧಿ, ಮನೆ ನಿರ್ಮಾಣದಂತಹ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಸಂಘದ ಸದಸ್ಯರಿಂದ ದೇಣಿಗೆ ಪಡೆದು ಫ್ರೀಜರ್ ಖರೀದಿಸಿ ಸಾರ್ವಜನಿಕವಾಗಿ ಲೋಕಾರ್ಪಣೆ ಮಾಡಲಾಗಿದೆ. ಮುಂದೆಯೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಫ್ರೀಜರ್ ಅಗತ್ಯವಿರುವವರು ನಿಗದಿಪಡಿಸಲಾದ ನಿರ್ವಹಣಾ ವೆಚ್ಚ ನೀಡಬೇಕು. ಸಂಘದ ಸದಸ್ಯರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಅವರು, ಹೆಚ್ಚಿನ ಮಾಹಿತಿಗಾಗಿ ಮೊ.9035197151, 9448721118, 9731258197, 8722179009 ಸಂಪರ್ಕಿಸಬಹುದು.

ಸಮಾಜದ ಗೌರವಾಧ್ಯಕ್ಷ ಪದ್ಮನಾಭ, ಉಪಾಧ್ಯಕ್ಷ ಸಿ.ಆರ್.ಸಜೀವನ್, ಕಾರ್ಯಕಾರಿ ಸದಸ್ಯರಾದ ಮುರುಳಿ, ಸುರೇಶ್, ಪ್ರಸಾದ್, ರಾಜನ್ ಮತ್ತು ಚಂದ್ರಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net