ನಂದನ ನಿವಾಸಕ್ಕೆ ಮುತಾಲಿಕ ಭೇಟಿ

20 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಿಇಟಿ ಪರೀಕ್ಷೆ ಸಮಯದಲ್ಲಿ ನಗರದ ವಿದ್ಯಾರ್ಥಿ ನಂದನ ಏರಿ ಅವರ ಜನಿವಾರ ಕತ್ತರಿಸಿರುವ ಘಟನೆ ತಿಳಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ, ವಿದ್ಯಾರ್ಥಿ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.

ನಂದನ ಹಾಗೂ ಆತನ ತಂದೆ ವಿವೇಕ ಏರಿ ಅವರೊಂದಿಗೆ ಮಾತನಾಡಿದ ಮುತಾಲಿಕ, ಘಟನೆಯ ಸಮಗ್ರ ಮಾಹಿತಿ ಪಡೆದರು. ಬಳಿಕ ಈ ವಿಷಯದಿಂದ ವಿಚಲಿತರಾಗದಿರಿ. ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸುವುದಾಗಿ ಭರವಸೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳನ್ನು ಹೆದರಿಸುವ ಹೊಸ ತಂತ್ರ. ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಬಾರದು. ಇಂತಹ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಜನ ಉಗಿಯುತ್ತಿದ್ದಾರೆ. ಜನಿವಾರ ಒಂದು ದಾರವಲ್ಲ. ಧಾರ್ಮಿಕ ವಿಧಿಗಳ ಮೂಲಕ ವೈಜ್ಞಾನಿಕವಾಗಿ ಧಾರಣೆ ಮಾಡಿದ್ದು. ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಕೆಲಸ ಮಾಡಿರುವ ಸರ್ಕಾರ ವಿದ್ಯಾರ್ಥಿಗಳ ತಂದೆ-ತಾಯಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹಿಜಾಬ್​, ಬುರ್ಖಾಗೆ ಅವಕಾಶ ಕೊಡುವ ಸರ್ಕಾರಕ್ಕೆ, ಆ ಧರ್ಮದ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಇನ್ನು ಮುಂದೆ ಹಿಂದೂ ಸಮಾಜದ ಸಿಡಿದೇಳುತ್ತದೆ. ಬ್ರಾಹ್ಮಣರು ಮಾತ್ರ ಜನಿವಾರ ಹಾಕುವುದಿಲ್ಲ. 20 ಜಾತಿಯವರು ಜನಿವಾರ ಹಾಕಿಕೊಳ್ಳುತ್ತಾರೆ. ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಶಾಪ ತಟ್ಟುತ್ತದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net