ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

11 RON 2
Published on

ರೋಣ: ಪಟ್ಟಣ ಮತ್ತು ತಾಲೂಕಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ಸರ್ಕಾರ ವಿವಿಧ ರೀತಿಯ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದಾರೆ ಎಂದು ಸಿಪಿಐ ಎಸ್.ಎಸ್. ಬೀಳಗಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ನಿಮಿತ್ತ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮಂಗಳವಾರ ಹೆಲ್ಮೆಟ್ ವಿತರಿಸಿ ಅವರು ಮಾತನಾಡಿದರು.

ಹೆಲ್ಮೆಟ್ ಕಡ್ಡಾಯ ಎಂದು ಜಾಗೃತಿ ಮೂಡಿಸುವ ಕೆಲಸ ರೋಣ ಪೊಲೀಸ್ ಠಾಣೆಯಿಂದ ಮಾಡಲಾಗಿದೆ. ಆದರೂ ಬೈಕ್ ಸವಾರರು ನಿಯಮ ಪಾಲಿಸುತ್ತಿಲ್ಲ. ದ್ವಿಚಕ್ರ ವಾಹನಕ್ಕಿಂತಲೂ ತಮ್ಮ ಜೀವ ಅಮೂಲ್ಯವಾದುದು. ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದರು.

ನರಗುಂದ ಡಿವೈಎಸ್‌ಪಿ ಪ್ರಭುಗೌಡ ಕಿರದಳ್ಳಿ, ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ವಿ.ಎಸ್. ಚವಡಿ, ಎಎಸ್‌ಐ ಎಸ್.ಬಿ. ಪವಾಡೆ, ಮಂಜುನಾಥ ಕುರಿ, ರಮೇಶ ಜುಂಗನ್ನವರ, ಕುಮಾರ ತಿಗರಿ, ಎನ್.ಎಸ್. ಚಿಮ್ಮನಕಟ್ಟಿ, ಪುಂಡಲಿಕಪ್ಪ ದಾಸರ, ಹನುಮಂತ ಹುಲ್ಲೂರ, ಬಸಮ್ಮ ಪಾಟೀಲ, ಎಸ್.ಎಚ್. ಶಂಕ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net