ಕಡ್ಡಾಯವಾಗಿ ಛಲವಾದಿ ಎಂದೇ ನಮೂದಿಸಿ

7blrp2-manjunatha
ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ್ .
Published on

ಬೇಲೂರು: ಒಳಮೀಸಲಾತಿ ಸಂಬಂಧ ಜಾತಿ ಜನಗಣತಿ ಈಗಾಗಲೇ ಪ್ರಾರಂಭವಾಗಿದ್ದು,ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಸಮುದಾಯದವರು ಕಡ್ಡಾಯವಾಗಿ ಛಲವಾದಿ ಎಂದು ತಪ್ಪದೆ ನಮೂದಿಸಬೇಕು ಎಂದು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದರು.

ರಾಜ್ಯದ ಪರಿಶಿಷ್ಟ ಜಾತಿಯವರ ಪಟ್ಟಿಯಲ್ಲಿ 101 ಜಾತಿಗಳಿವೆ. ಇದ್ದರೂ ಅವು ಒಂದೇ ಗುಂಪಲ್ಲ. ಬಲಗೈ ಪಂಥಿಯರಾದ ನಾವುಗಳು 40 ಉಪ ಜಾತಿಯ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದೇವೆ. ಸಮೀಕ್ಷೆ ಪ್ರಾರಂಭವಾಗಿದ್ದು, ನಮ್ಮ ಬಲಗೈ ಸಮುದಾಯದವರು ಛಲವಾದಿ ಎಂದು ನಮೂದಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಮ್ಮ ಛಲವಾದಿ ಸಮುದಾಯದ ಮುಖಂಡರಿಂದ ಅರಿವು ಮೂಡಿಸಲಾಗುತ್ತಿದೆ. ಜಾತಿಗಳ ವರ್ಗೀಕರಣದಿಂದ ನಿಖರ ಅಂಕಿ-ಅಂಶ ದೊರೆತು ಸರ್ಕಾರದ ಸವಲತ್ತು ಪಡೆಯಲು ಅನುಕೂಲವಾಗಲಿದೆ. ನಮ್ಮ ತಾಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚು ಬಲಗೈನವರಿದ್ದು ಪ್ರತಿಯೊಬ್ಬರೂ ಜಾತಿ ಜನಗಣತಿ ಸಂದರ್ಭ ಛಲವಾದಿ ಎಂದು ನಮೂದಿಸಬೇಕು ಎಂದರು.

ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪರ್ವತಯ್ಯ, ಗೌರವಾಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಪುಟ್ಟರಾಜು, ಸಂಘಟನಾ ಕಾರ್ಯದರ್ಶಿ ಕುಮಾರ್, ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net