ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ

eye
Published on

ಹುಬ್ಬಳ್ಳಿ: ಜನ ಸಾಮಾನ್ಯರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ನೇತ್ರದಾನದ ಶಪಥ ಮಾಡಿಸುವ ಮೂಲಕ ಮರಣಾನಂತರವು ವ್ಯಕ್ತಿಯು ಇನ್ನೊಬ್ಬರ ಬಾಳಿಗೆ ಬೆಳಕಾಗುವಂತೆ ಮಾಡಬಹುದು ಎಂದು ನಟ ನವೀನ ಶಂಕರ ಹೇಳಿದರು.

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಶ್ರೀ ಗುರು ಮಹಿಪತಿರಾಜ ನೇತ್ರ ಭಂಡಾರ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ದೃಷ್ಟಿಗಾಗಿ ನಡೆ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವರ್ಣಾ ಗ್ರುಪ್ ಆಫ್ ಕಂಪನೀಸ್​ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಮನುಷ್ಯನಿಗೆ ಕಣ್ಣುಗಳು ಬಹಳ ಮಹತ್ವದ್ದು. ಅಂಧರ ಬದುಕು ಚಿಂತಾಜನಕವಾಗಿರುತ್ತದೆ. ನೇತ್ರದಾನವೇ ಇದಕ್ಕೆಲ್ಲ ಪರಿಹಾರ. ನೇತ್ರದಾನಕ್ಕೆ ಜನರು ಸ್ವ ಇಚ್ಛೆಯಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.

ಡಿಸಿಪಿ ರವೀಶ ಸಿ.ಆರ್. ಮಾತನಾಡಿ, ಅಂಧರು ಜಗತ್ತನ್ನು ಕಾಣಬೇಕಾದರೆ ನೇತ್ರದಾನದಿಂದಲೇ ಸಾಧ್ಯ ಎಂದು ಹೇಳಿದರು.

ಕಿಮ್ಸ್​ನಿಂದ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯವರೆಗೆ ಜಾಥಾ ನಡೆಸಲಾಯಿತು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಗೋವಿಂದ ಜೋಶಿ, ಡಾ. ವಿಜಯಲಕ್ಷ್ಮಿ ಬಿರಾದಾರ, ಡಾ. ಈಶ್ವರ ಹೊಸಮನಿ, ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಎ. ಎಸ್. ಗುರುಪ್ರಸಾದ, ಡಾ. ಕೆ. ವಿ. ಸತ್ಯಮೂರ್ತಿ, ಡಾ. ಆರ್. ಕೃಷ್ಣಪ್ರಸಾದ, ಡಾ. ಶ್ರೀನಿವಾಸ ಜೋಶಿ, ಡಾ. ಅನಿಕೇತ ಶಾಸ್ತ್ರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net