ಪರವಾನಗಿ ಕಡ್ಡಾಯವಾಗಿ ಪ್ರದರ್ಶಿಸಿ

nrp meet
ಎನ್.ಆರ್.ಪುರದ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಯಿತು. ಕೃಷಿ ಇಲಾಖೆ ದಾಸ್ತಾನು ನಿರ್ವಾಹಕ ಅರುಣ್, ಕೃಷಿ ಪರಿಕರ ಮಾರಾಟಗಾರರು ಇದ್ದರು.
Published on

ನ್.ಆರ್.ಪುರ: ಕೃಷಿ ಪರಿಕರ ಮಾರಾಟ ಅಂಗಡಿಯಲ್ಲಿ ಪರವಾನಗಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ರಸಗೊಬ್ಬರ, ಕೃಷಿ ಪರಿಕರಗಳನ್ನು ಖರೀದಿಸಿದಾಗ ಅಧಿಕೃತ ಬಿಲ್‌ಗಳನ್ನು ನೀಡಬೇಕು ಎಂದು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಪಾಟೀಲ್ ತಿಳಿಸಿದರು.

ಬುಧವಾರ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಎರಡು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸುವಂತೆ ರೈತರಿಗೆ ಸಲಹೆ ನೀಡಬೇಕು. ಮಲೆನಾಡಿನ ಭಾಗದ ಮಣ್ಣಿನಲ್ಲಿ ಹುಳಿಮಣ್ಣು ಸಾಂಧ್ರತೆ ಹೆಚ್ಚು ಇರುವುದರಿಂದ ಸುಣ್ಣ ಮತ್ತು ಡೊಲೊಮೈಟ್‌ನ್ನು ಮಣ್ಣಿಗೆ ಸೇರಿಸಲು ತಿಳಿಸುವಂತೆ ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ರಸಗೊಬ್ಬರ ಹಾಗೂ ಕೀಟನಾಶದ ಕುರಿತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡಬೇಕು ಎಂದರು.
ಕೃಷಿ ಇಲಾಖೆ ದಾಸ್ತಾನು ನಿರ್ವಾಹಕ ಅರುಣ್ ಮತ್ತು ತಾಲೂಕಿನ ವಿವಿಧ ಕೃಷಿ ಪರಿಕರ ಮಾರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net