ಮುಸ್ಲಿಮರು ಸರ್ಕಾರದ ನಿಯಮಾನುಸಾರ ಬಕ್ರೀದ್ ಹಬ್ಬ ಆಚರಿಸಲಿ

Bakrid Koppal
Published on

ಬೋರಗಾಂವ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸರಳವಾಗಿ, ಸರ್ಕಾರದ ನಿಯಮಾನುಸಾರ ಆಚರಿಸಬೇಕು ಎಂದು ಸದಲಗಾ ಪೊಲೀಸ್ ಠಾಣೆ ಉಪ ನಿರೀಕ್ಷಕ ಆರ್.ವೈ. ಬೀಳಗಿ ಹೇಳಿದ್ದಾರೆ. ಆ. 1ರಂದು ಬಕ್ರೀದ್ ಹಿನ್ನೆಲೆಯಲ್ಲಿ ಸಮೀಪದ ಸದಲಗಾ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾರ್ಥನಾ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮಾಜ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಪೊಲೀಸ್ ಸಹಾಯಕ ಎಸ್.ಎಸ್. ಪಾಟೀಲ, ಸಂಜೀವ ಜಮಖೋಳಿ, ಎಲ್.ಎಸ್. ಖೋತ, ಸಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net