ಕಾಂಗ್ರೆಸ್​ನಿಂದ ಮುಸ್ಲಿಮರ ಕಡೆಗಣನೆ

muslim reservation karnataka muslim unity protest koppal
Published on

ಕೊಪ್ಪಳ: ಮುಸ್ಲಿಮರ ಶೇ.4ರಷ್ಟು ಮೀಸಲನ್ನು ಬಿಜೆಪಿ ಸರ್ಕಾರ ಕಸಿದುಕೊಂಡಿದೆ. ತಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಮರು ಕಲ್ಪಿಸುವ ಭರವಸೆ ನೀಡಿದ್ದ ಕಾಂಗ್ರೆಸ್​ 14 ತಿಂಗಳಾದರೂ ಮೌನವಹಿಸಿದೆ. ನಮ್ಮನ್ನು ಹೀಗೆ ರ್ನಿಲಸಿದರೆ ರಾಜ್ಯದಲ್ಲಿ ಕಾಂಗ್ರೆಸ್​ಗೆ ಪರ್ಯಾಯ ಶಕ್ತಿ ಹುಟ್ಟುಹಾಕುತ್ತೇವೆ ಎಂದು ಕರ್ನಾಟಕ ಮುಸ್ಲಿಮ್​ ಯೂನಿಟಿ ಅಧ್ಯಕ್ಷ ಜಬ್ಬರಸಾಬ್​ ಕಲಬುರ್ಗಿ ಎಚ್ಚರಿಸಿದರು.

ಜನಸಂಖ್ಯೆಯಲ್ಲಿ ನಾವು ನಿರ್ಣಾಯಕ ಪಾತ್ರ ವಹಿಸುತ್ತಿದ್ದೇವೆ. ಸಮುದಾಯ ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಹಿಂದುಳಿದಿದೆ. ಬಿಜೆಪಿ ಸರ್ಕಾರ 2ಬಿ ಅಡಿ ಇದ್ದ ಶೇ.4ರಷ್ಟು ಮೀಸಲು ರದ್ದು ಮಾಡಿದೆ. ಕಾಂಗ್ರೆಸ್​ ಅದನ್ನು ಮತ್ತೆ ನೀಡುತ್ತಿಲ್ಲ. ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ, ರ್ನಿಲಕ್ಷ$್ಯ ಮುಂದುವರೆದಿದೆ. ಚುನಾವಣೆಯಲ್ಲಿ ನಾವೆಲ್ಲ ಕಾಂಗ್ರೆಸ್​ ಬೆಂಬಲಿಸಿದ್ದಕ್ಕೆ ಅವರು 130ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ನಾವು ಕೈ ಬಿಟ್ಟರೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಿನಿಂದಲೇ ಸಮುದಾಯ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಸಮುದಾಯ ಶಾಸಕ, ಸಚಿವರಿಗೂ ಮನವಿ ಮಾಡಿದ್ದೇವೆ. ನಮ್ಮ ಧರ್ಮ ಗುರುಗಳು ಹೇಳಿದ್ದಕ್ಕೆ ನಾವು ಕಾಂಗ್ರೆಸ್​ಗೆ ಮತ ಹಾಕಿದ್ದೇವೆ. ಹೀಗಾಗಿ ಅವರಿಗೆ ಈ ಹೋರಾಟದ ನೇತೃತ್ವ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ಅವರೊಂದಿಗೆ ಸಭೆ ನಡೆಸಿ ರೂಪುರೇಷ ಸಿದ್ಧಪಡಿಸುತ್ತೇವೆ. ಸಂಪುಟದಲ್ಲಿ ರ್ನಿಣಯ ಕೈಗೊಂಡು ಮೀಸಲಾತಿ ಮತ್ತೆ ನೀಡಬೇಕು. ಶೆ.4ರಿಂದ 8ಕ್ಕೆ ಹೆಚ್ಚಿಸಬೇಕು. ಸ್ಥಳಿಯ ಸಂಸ್ಥೆಗಳಲ್ಲಿನ 2ಬಿಯಡಿ ಒಳ ಮೀಸಲಾತಿ ಕಲ್ಪಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ. ಅದಕ್ಕೆ ಸ್ಪಂದಿಸದಿದ್ದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಯೂನಿಟಿ ರಾಜ್ಯ ಸಂಚಾಲಕ ಮೆಹಬೂಬ್​ ಸಾಬ್​ ಸರ್ಕಾವಸ್​, ಯುವ ಘಟಕ ರಾಜ್ಯಾಧ್ಯಕ್ಷ ನೂರ್​ ಅಹ್ಮದ್​, ಅಂಜುಮನ್​ ಕಮಿಟಿ ಅಧ್ಯಕ್ಷ ಆಸೀಫ್​ ಕರ್ಕಿಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net