ಇಂದು ಮುಸ್ಲಿಮರ ಪ್ರತಿಭಟನೆ

Muslim protest today
Published on

ದೇವರಹಿಪ್ಪರಗಿ: ವಕ್ಫ್ ಮಸೂದೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ಬೃಹತ್ ರ‌್ಯಾಲಿ ನಡೆಯಲಿದೆ ಎಂದು ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆ ಟಿಪ್ಪು ಸುಲ್ತಾನ ವತ್ತದಿಂದ ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ಅಂಬೇಡ್ಕರ್ ವತ್ತಕ್ಕೆ ಆಗಮಿಸಿ ತಹಸೀೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಕಮಿಟಿಯ ಉಪಾಧ್ಯಕ್ಷ ರಫೀಕ್ ಪಾನಪರೋಷ್,ಭೀಮ ಆರ್ಮಿ ರಾಜ್ಯ ಉಪಾಧ್ಯಕ್ಷ ಪ್ರಭು ಅಂಬಲಗಿ ಮಾತನಾಡಿದರು.

ಗೋಷ್ಠಿಯಲ್ಲಿ ಹೈದರಸಾಬ್ ಮುಲ್ಲಾ, ಮುನೀರ್‌ಅಹ್ಮದ್ ಮಳಖೇಡ, ಬಾಬು ದೇವಣಗಾಂವ, ಭಾಸ್ಕರ್ ಗುಡಿಮನಿ, ಸುರೇಶ ಒಡೆಯರ್, ಸಮೀರ ಮಕಾಂದಾರ, ಇಮಾಮ್ ಮುಲ್ಲಾ, ಹಾಶೀಂ ಹಳ್ಳಿ, ಹಾಜೀಲಾಲ್ ಮಸಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net