

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆ ಸಮೀಪವಿರುವ ಶ್ರೀ ರಾಮ ಮಂದಿರ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀ ಗಣೇಶ ಮೂರ್ತಿಗೆ ಬುಧವಾರ ಮುಸ್ಲಿಂ ಮುಖಂಡರು ಪೂಜೆ ಸಲ್ಲಿಸಿದರು.
ಪ್ರಸನ್ನ ವೀರಾಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ.ಎಸ್. ರಾಘವನ್ ಅವರು ಮುಸ್ಲಿಂ ಮುಖಂಡರಿಗೆ ಸಿಹಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಾಂತರಾಜು, ನಾಮ ನಿರ್ದೇಶಿತ ಸದಸ್ಯ ಅನ್ಸರ್ ಬೇಗ್, ಮುಖಂಡರಾದ ನಟರಾಜು ಮಾಳಿಗೆ, ಪ್ರಭುಸ್ವಾಮಿ, ಇನಾಯತ್ ಪಾಷ, ಮನ್ಸೂರ್ ಪಾಷ, ಮೊಹಮ್ಮದ್ ಇಮ್ದಾದ್‌ವುಲ್ಲಾ, ನಿಸಾರ್ ಅಹಮ್ಮದ್, ಆರೀಪ್‌ವುಲ್ಲಾ, ವಸೀಮ್, ಮಹಮ್ಮದ್ ಅತೀಖ್, ಶಹದಬ್ ಅಹಮ್ಮದ ಇತರರಿದ್ದರು.\