ಮುಸ್ಲಿಂ ಕಪ್: ವಿರಾಜಪೇಟೆ ಬ್ಲ್ಯಾಕ್ ಕೋಬ್ರಾ ತಂಡ ಚಾಂಪಿಯನ್

14adarshkdga1
Published on

ಮಡಿಕೇರಿ: ಕೊಡಗು ಮುಸ್ಲಿಂ ಸ್ಫೋರ್ಟ್ಸ್ ಟ್ರಸ್ಟ್ ಮತ್ತು ಓಂುಸಿಸ್ ಸ್ಫೋರ್ಟ್ಸ್ ಕ್ಲಬ್ ಹೋದವಾಡ ಆಶ್ರಯದಲ್ಲಿ ಇತ್ತೀಚೆಗೆ ನಡೆದ ೧೯ನೇ ವರ್ಷದ ಕೊಡಗು ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಬ್ಲ್ಯಾಕ್ ಕೋಬ್ರಾ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿತು.


ಚರಿಯಪರಂಬು ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ೧೯ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರೀಡಾಕೋಟದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ನೆಡೆಸಿದ ಕೆವೈಸಿಸಿ ತಂಡ ೫ ಓವರ್‌ನಲ್ಲಿ ೪೩ ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಬ್ಲ್ಯಾಕ್ ಕೋಬ್ರಾ ತಂಡ ೪ ಓವರ್ ೫ನೇ ಎಸೆತದಲ್ಲಿ ಅಮೋಘ ವಿಜಯಾಶಾಲಿಯದರು.


ಕ್ವಾಟರ್ ಫೈನಲ್‌ನ ಮೊದಲ ಪಂದ್ಯದಲ್ಲಿ ಬ್ಯಾರಿ ಮಡಿಕೇರಿ ತಂಡವನ್ನು ಆಶಿಶ್ ಗೋಣಿಕೊಪ್ಪ ತಂಡ ಮಣಿಸಿ ಸೆಮಿಫೈನಲ್ ಪ್ರವೇಸಿದರು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಶಿಶ್ ತಂಡ ೫ ಓವರ್‌ನಲ್ಲಿ ೫೪ ರನ್ ಗಳಿಸಿದರು. ಗುರಿ ಬೆನ್ನೆಟಿದ ಬ್ಲ್ಯಾಕ್ ಕೋಬ್ರಾ ತಂಡ ೪ ಓವರ್‌ಗಳಲ್ಲಿ ಪಂದ್ಯ ವಿಜಯ ಶಾಲಿಯಾಗಿ ಫೈನಲ್ ಪ್ರವೇಶಿಸಿದರು.


೨ನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೆವೈಸಿಸಿ ಕಡಂಗ ತಂಡ ೫ ಓವರ್‌ನಲ್ಲಿ ೨ ವಿಕೆಟ್ ೯೩ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಫ್ರೀಡಂ ಬಾಯ್ಸ ಹುಂಡಿ ತಂಡ ೬೨ ರನ್‌ಗಳಿಸಿ ೩೧ ರನ್‌ಗಳ ಅಂತರದಲ್ಲಿ ಕಡಂಗ ತಂಡ ಫೈನಲ್ ಪ್ರವೇಶಿಸಿತು. ತೃತೀಯ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಫ್ರೀಡಂ ಬಾಯ್ಸ್ ಹುಂಡಿ ತಂಡ ಆಶಿಶ್ ಗೋಣಿಕೊಪ್ಪ ತಂಡವನ್ನು ಮಣಿಸಿತು.


ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಬ್ಲಾಕ್ ಕೋಬ್ರಾ ತಂಡದ ನಾಸಿರ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೆವೈಸಿಸಿ ತಂಡದ ಆಸ್ಕರ್ ಪಡೆದುಕೊಂಡರು.
ಸಮಾರೋಪ: ಒಯಸಿಸ್ ಸಂಘದ ಶಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಮಾತನಾಡಿ, ಕ್ರೀಡೆಯಿಂದ ಸೌಹಾರ್ದತೆ ಹೆಚ್ಚಾಗಲಿದ್ದು, ಜಿಲ್ಲೆಯಲ್ಲಿ ಒಳ್ಳೆಯ ಕ್ರೀಡಾಂಗಣಗಳು ಹೆಚ್ಚಾಗಲಿ ಎಂದು ಆಶಿಸಿದರು.


ಸಮಾಜ ಸೇವಕ ಮಂತರ್ ಗೌಡ ಮಾತನಾಡಿ, ಸರ್ಕಾರದಿಂದ ಕ್ರೀಡಾಕೋಟಕ್ಕೆ ಅನುದಾನ ಸಿಗಬೇಕಾಗಿದೆ ಎಂದರು.


ಮುಸ್ಲಿಂ ಕಪ್ ಸ್ಥಾಪಕ ರಶೀದ್ ಎಡಪಾಲ ಮಾತನಾಡಿ, ಯುವ ಪ್ರತಿಭೆಗಳನ್ನು ಹೊರ ತರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ನುಡಿದರು.


ಕಾರ್ಯಕ್ರದಲ್ಲಿ ಸಂಘದ ವತಿಯಿಂದ ೪ ಅಂಗವಿಕಲರಿಗೆ ವೀಲ್ ಚೇರ್ ನೀಡಲಾಯಿತು. ನಂತರ ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಮುಸ್ಲಿಂ ಕಪ್ ಸ್ಥಾಪಕ ರಶೀದ್ ಕುಪ್ರೋಡಂಡ, ಕೊಡಗು ಮುಸ್ಲಿಂ ಸ್ಫೋರ್ಟ್ಸ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಅಮೀನ್ ಮೊಹಸಿನ್, ಹ್ಯಾರಿಸ್, ಮನ್ಸೂರ್ ಅಲಿ, ಯಾಕೂಬ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net