ಮುಸ್ಲಿಂ ಕ್ರಿಕೆಟ್ ಕಪ್ ಲೋಗೋ ಅನಾವರಣ

29adarshkdga4
Published on

ಮಡಿಕೇರಿ: ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಕೊಟ್ಟಮುಡಿ ವತಿಯಿಂದ ಮಾ.೪ ರಿಂದ ೧೨ ರವರೆಗೆ ನಡೆಯುವ ಕೊಡಗು ಮುಸ್ಲಿಂ ಕ್ರಿಕೆಟ್ ಕಪ್-೨೦೨೩ ಪಂದ್ಯಾವಳಿಯ ಲೋಗೋವನ್ನು ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅನಾವರಣಗೊಳಿಸಿದರು.


ಚಾಮರಾಜಪೇಟೆಯ ಶಾಸಕರ ಕಚೇರಿಯಲ್ಲಿ ಇತ್ತೀಚೆಗೆ ಲೋಗೋ ಬಿಡುಗಡೆಗೊಳಿಸಿದ ಅವರು ಆಯೋಜಕರಿಗೆ ಹಾಗೂ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.


ಈ ಸಂದರ್ಭ ಪ್ರಮುಖರಾದ ಅಯುಬ್ ಖಾನ್, ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಾಫಿ ಕೊಟ್ಟಮುಡಿ, ಕಾರ್ಯದರ್ಶಿ ಕೆ.ಯು.ಶಿಯಾಬುದ್ದೀನ್ , ಪದಾಧಿಕಾರಿಗಳಾದ ಅಶ್ರಫ್ ಟಿ.ಎಚ್ ತಕ್ಕ ಪಳ್ಳಿ, ರೆಹಮಾನ್ ಅಂದಾಯಿ, ಸುಹೈಲ್ ಎಂ.ಎ ಮತ್ತಿತರರು ಉಪಸ್ಥಿತರಿದ್ದರು.


ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಪಂದ್ಯಾವಳಿ ನಾಪೋಕ್ಲುವಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಫಿ ಕೊಟ್ಟಮುಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net